ಕರ್ನಾಟಕ

karnataka

ETV Bharat / state

ಮೊಹರಂ ಆಚರಣೆ ವೇಳೆ ಅಗ್ನಿಕುಂಡಕ್ಕೆ ಬಿದ್ದ ವ್ಯಕ್ತಿ.. ಮುಂದೇನಾಯ್ತು? - Muharram update

ತಾಲೂಕಿನ ಗಾವರವಾಡದಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೆಂಡ ಹಾಯುವ ವೇಳೆ ಅಗ್ನಿಕುಂಡದಲ್ಲಿ ಬಿದ್ದು ಗಾಯಗೊಂಡಿದ್ದಾನೆ. ಹಾಗೆ ಮತ್ತೊಂದು ಕಡೆ ಮುಂಡರಗಿ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹಬ್ಬ ಆಚರಿಸಿದ್ದಾರೆ.

A man falling into Agnihonda on occasion of muharram
ಮೊಹರಂ ಹಬ್ಬ ಆಚರಣೆ ವೇಳೆ ಅಗ್ನಿಹೊಂಡಕ್ಕೆ ಬಿದ್ದ ವ್ಯಕ್ತಿ...

By

Published : Aug 19, 2021, 7:01 PM IST

Updated : Aug 19, 2021, 7:35 PM IST

ಗದಗ: ಮೊಹರಂ ಹಬ್ಬವನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆದರೆ, ಜಿಲ್ಲೆಯ ಅನೇಕ ಕಡೆಗಳಲ್ಲಿ ಕೋವಿಡ್ ನಿಯಮ ಬ್ರೇಕ್ ಮಾಡಲಾಗಿದೆ. ಜಿಲ್ಲೆಯ ಹಲವೆಡೆ ನಿನ್ನೆಯಿಂದಲೇ ಕೆಂಡ ಹಾಯುವ ಕಾರ್ಯಕ್ರಮ ನಡೀತಿದೆ. ಮೊಹರಂ ಪಂಜಾಗಳ ಮೆರವಣಿಗೆಯಲ್ಲಿ ಜನ ಕೋವಿಡ್ ನಿಯಮ ಮೀರಿ ಗುಂಪು ಗುಂಪಾಗಿ ಸೇರ್ತಿದ್ದು ಮಾಸ್ಕ್, ಸಾಮಾಜಿಕ ಅಂತರ ಸಂಪೂರ್ಣ ಮಾಯವಾಗಿವೆ.

ಇನ್ನು ತಾಲೂಕಿನ ಗಾವರವಾಡದಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೆಂಡ ಹಾಯುವ ವೇಳೆ ಅಗ್ನಿಕುಂಡದಲ್ಲಿ ಬಿದ್ದು ಗಾಯಗೊಂಡಿದ್ದಾನೆ. ಈ ಗ್ರಾಮದಲ್ಲಿ ಮುಸ್ಲಿಂ ಜನಾಂಗ ಇಲ್ಲವಾದರೂ, ಹಿಂದೂಗಳೇ ಒಟ್ಟಾಗಿ ಅದ್ಧೂರಿ ಮೊಹರಂ ಹಬ್ಬ ಆಚರಿಸುತ್ತಾರೆ. ಇಂದು ಸಹ ಮೊಹರಂ ವೇಳೆ ದೇವರು ಹಿಡಿದುಕೊಂಡು ಅಗ್ನಿ ಹೊಂಡದಲ್ಲಿ ಹಾಯ್ದು ಹೋಗುವ ವೇಳೆ ವ್ಯಕ್ತಿಯೊಬ್ಬ ಆಯತಪ್ಪಿ ಬೆಂಕಿಯಲ್ಲಿ ಬಿದ್ದಿದ್ದಾನೆ.

ಮೊಹರಂ ಆಚರಣೆ ವೇಳೆ ಅಗ್ನಿಕುಂಡಕ್ಕೆ ಬಿದ್ದ ವ್ಯಕ್ತಿ..

ಆ ವ್ಯಕ್ತಿಯನ್ನು ರಕ್ಷಿಸಲು ಬಂದ ಮತ್ತೊಬ್ಬ ದೇವರು ಹೊತ್ತ ಮೌಲ್ವಿ ಸಹ ಆಯ ತಪ್ಪಿ ದಡಕ್ಕೆ ಬಿದ್ದಿದ್ದಾನೆ. ಬೆಂಕಿಯಲ್ಲಿ ಬಿದ್ದ ಗಾಯಾಳುವನ್ನು ಗದಗ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತೊಂದು ಕಡೆ ಮುಂಡರಗಿ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹಬ್ಬ ಆಚರಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಆದರೆ, ಇಷ್ಟೆಲ್ಲ ಜನಜಂಗುಳಿ ಕೂಡಿದರೂ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಇತ್ತಕಡೆ ಗಮನ ಹರಿಸಿಲ್ಲ.

Last Updated : Aug 19, 2021, 7:35 PM IST

ABOUT THE AUTHOR

...view details