ಗದಗ :ಗೆಳೆಯರೊಂದಿಗೆ ಈಜಲು ಹೋಗಿದ್ದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಟ್ಟಿರುವ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಲಕ್ಷ್ಮೇಶ್ವರ ಬಳಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು - A boy died by drwoned in to Agasthaya Theertha of Gadag
ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಹೊಂಡದಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ.
![ಲಕ್ಷ್ಮೇಶ್ವರ ಬಳಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು A boy died by drwoned in to water in Lakshmeshwar](https://etvbharatimages.akamaized.net/etvbharat/prod-images/768-512-9594250-854-9594250-1605790552386.jpg)
ಲಕ್ಷ್ಮೇಶ್ವರ ಬಳಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
ಪಟ್ಟಣದ ಅಗಸ್ತ್ಯತೀರ್ಥ ಹೊಂಡದಲ್ಲಿ ಮುಳುಗಿ ಹರ್ಷವರ್ಧನ್ ಅರಕೇರಿ (15) ಮೃತಪಟ್ಟಿದ್ದಾನೆ. ಮೂಲತ: ಬ್ಯಾಡಗಿಯ ನಿವಾಸಿಯಾಗಿರುವ ಹರ್ಷವರ್ಧನ್, ದೀಪಾವಳಿ ಹಬ್ಬಕ್ಕೆಂದು ಲಕ್ಷ್ಮೇಶ್ವರದ ಸಂಬಂಧಿಕರ ಮನೆಗೆ ಬಂದಿದ್ದ. ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ. ಈ ವೇಳೆ ಹೂಳಲ್ಲಿ ಸಿಲುಕಿ ಹೊರ ಬರಲಾರದೆ, ಹರ್ಷವರ್ಧನ್ ನೀರಲ್ಲಿ ಮುಳುಗಿದ್ದಾನೆ.
ಹರ್ಷವರ್ಧನ್ಗಾಗಿ ಹುಡುಕಾಟ ನಡೆಸಿದ ಅಗ್ನಿಶಾಮಕ ಸಿಬ್ಬಂದಿ
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಹರ್ಷವರ್ಧನ್ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.