ಕರ್ನಾಟಕ

karnataka

ETV Bharat / state

ಅಂಗನವಾಡಿಯಲ್ಲಿ ತೆರೆದಿಟ್ಟಿದ್ದ ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕ ಸಾವು... - ಕಾರ್ಯಕರ್ತೆಯರ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ

ಗದಗ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ತೆರೆದಿಟ್ಟಿದ್ದ ನೀರಿನ ಟ್ಯಾಂಕ್​​ಗೆ ಬಾಲಕನೊಬ್ಬ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಬಾಲಕ ಸಾವು
ಬಾಲಕ ಸಾವು

By

Published : Nov 29, 2019, 5:11 PM IST

ಗದಗ:ಅಂಗನವಾಡಿಯೊಂದರ ಪಕ್ಕದಲ್ಲಿನ ನೀರಿನ ಟ್ಯಾಂಕ್​ನಲ್ಲಿ ಬಾಲಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ರೋಣ ತಾಲೂಕಿನ ಕುರಡಗಿ ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ದುರ್ಗೇಶ್ ಪೂಜಾರ್ (5) ಮೃತ ಬಾಲಕ, ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ನೀರಿನ ಟ್ಯಾಂಕ್ ಇದ್ದು ಇದರ ಮುಚ್ಚಳ ತೆರೆದಿಡಲಾಗಿತ್ತು. ಇದನ್ನು ಅರಿಯದೇ ಮಗು ಆಟವಾಡುವಾಗ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ತೆರೆದಿಟ್ಟಿದ್ದ ನೀರಿನ ಟ್ಯಾಂಕ್​ಗೆ ಬಿದ್ದು ಬಾಲಕ ಸಾವು

ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಬಾಲಕನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾರ್ಯಕರ್ತೆಯರನ್ನ ಕೆಲಸದಿಂದ ವಜಾಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

For All Latest Updates

TAGGED:

ABOUT THE AUTHOR

...view details