ಗದಗ: ಜಿಲ್ಲೆಯಲ್ಲಿಂದು ಮತ್ತೆ 96 ಕೊರೊನಾ ಕೇಸ್ ಪತ್ತೆಯಾಗಿವೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 1,764ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಓರ್ವ ವ್ಯಕ್ತಿ ಮೃತಪಟ್ಟಿರೋದಾಗಿ ವರದಿಯಾಗಿದ್ದು, ಸಾವಿಗೀಡಾದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಗದಗನಲ್ಲಿ ನಿಲ್ಲದ ಕೊರೊನಾ ಓಟ... ಇಂದು ಮತ್ತೆ 96 ಜನರಿಗೆ ಸೋಂಕು ದೃಢ - Gadag Corona case
ಇಂದು ಓರ್ವ ವ್ಯಕ್ತಿ ಕೊರೊನಾದಿಂದಾಗಿ ಮೃತಪಟ್ಟರೆ, 96 ಮಂದಿಗೆ ಕೊರೊನಾ ವಕ್ಕರಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, 1,091 ಸಕ್ರಿಯ ಪ್ರಕರಣಗಳಿವೆ.
ಗದಗ್ನಲ್ಲಿ ನಿಲ್ಲದ ಕೊರೊನಾ ಓಟ...ಇಂದು ಮತ್ತೆ 96 ಜನರಿಗೆ ಸೋಂಕು ದೃಢ
ಇಂದು 55 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜೊತೆಗೆ ಈವರೆಗೆ 633 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನು ಒಟ್ಟು ಸಕ್ರಿಯ ಪ್ರಕರಣಗಳು 1,091ಕ್ಕೆ ಏರಿಕೆಯಾಗಿದ್ದು, ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಸುಂದರೇಶಬಾಬು ಮಾಹಿತಿ ನೀಡಿದ್ದಾರೆ.