ಗದಗ: ಇದುವರೆಗೆ ಗದಗ ಜಿಲ್ಲೆಯಲ್ಲಿ 860 ಜನರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ ಅಂತ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
860 ಜನರ ಮೇಲೆ ತೀವ್ರ ನಿಗಾ : ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ - ಗದಗ ಜಿಲ್ಲೆ
ಜಿಲ್ಲೆಯಲ್ಲಿ 860 ಜನರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಒಟ್ಟು 569 ವರದಿಗಳು ನೆಗಟಿವ್ ಆಗಿವೆ. 38 ವರದಿಗಳು ತಿರಸ್ಕರಿಸಲ್ಪಟ್ಟಿದ್ದು, 227 ವರದಿಗಳು ಬರಲು ಬಾಕಿ ಇವೆ.
ಇದರಲ್ಲಿ ಇಂದು ಹೊಸದಾಗಿ 140 ಜನರ ಮೇಲೆ ನಿಗಾ ವಹಿಸಲಾಗಿದೆ. ಇನ್ನು 28 ದಿನಗಳ ನಿಗಾ ಅವಧಿ ಪೂರೈಸಿದವರು 189 ಜನರಿದ್ದರೆ, ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 638 ಜನ. ಇನ್ನು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 32 ಜನ, ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ 838. ಇದರಲ್ಲಿ ಇಂದು ಹೊಸದಾಗಿ 145 ಜನರ ರಕ್ತ ಮಾದರಿಯನ್ನು ಕಳುಹಿಸಲಾಗಿದೆ.
ಇದುವರೆಗೂ ಒಟ್ಟು 569 ವರದಿಗಳು ನೆಗಟಿವ್ ಆಗಿವೆ. 38 ವರದಿಗಳು ತಿರಸ್ಕರಿಸಲ್ಪಟ್ಟಿದ್ದು, 227 ವರದಿಗಳು ಬರಲು ಬಾಕಿ ಇವೆ. ಜಿಲ್ಲೆಯಲ್ಲಿ ಪಿ-166 , ಪಿ-304, ಪಿ-370, ಪಿ-396 ಒಟ್ಟು 4 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.