ಕರ್ನಾಟಕ

karnataka

ETV Bharat / state

7 ಕೊರೊನಾ ಸೋಂಕಿತರು ಗುಣಮುಖ.. ಗದಗ ಕೋವಿಡ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್.. - 7 Corona infected cured in Gadag

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದವರು ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವಂತೆ ಸೂಚನೆ ನೀಡಲಾಗಿದೆ.

Gadag
ಗದಗದಲ್ಲಿ 7 ಜನ ಕೊರೊನಾ ಸೊಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

By

Published : Jun 7, 2020, 8:30 PM IST

ಗದಗ :ಜಿಲ್ಲೆಯಲ್ಲಿ ಇಂದು 7 ಜನ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಜಿಮ್ಸ್​ನ ಕೋವಿಡ್-19 ನಿಗದಿತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಪಿ-972, ಪಿ-1179, ಪಿ-1307, ಪಿ-1744, ಪಿ-1746, ಪಿ-1747, ಹಾಗೂ ಪಿ-1763 ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವಂತೆ ಸೂಚನೆ ನೀಡಲಾಗಿದೆ. ಅವರ ಕುರಿತು ಆರೋಗ್ಯ ಕಾರ್ಯಕರ್ತರು ನಿರಂತರ ನಿಗಾವಹಿಸಲಿದ್ದಾರೆ.

ಈ ಎಲ್ಲಾ 7 ರೋಗಿಗಳಿಗೆ ವೈದ್ಯ ಹಾಗೂ ವೈದ್ಯೇತರ ತಂಡದಿಂದ ಚಿಕಿತ್ಸೆ ನೀಡಲಾಗಿತ್ತು. ಈ ಸಮಯದಲ್ಲಿ ಅವರಿಗೆ ಯಾವುದೇ ತೊಂದರೆಗಳು ಕಂಡು ಬಾರದ ಹಿನ್ನೆಲೆ ಹಾಗೂ ಅವರ ಗಂಟಲು ಮಾದರಿ ನೆಗೆಟಿವ್ ಆಗಿದ್ದರಿಂದ ಇಂದು ಆಸ್ಪತ್ರೆಯಿಂದ ಗುಣಮುಖರೆಂದು ಬಿಡುಗಡೆಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 43 ಜನ ಸೋಂಕಿತರ ಪೈಕಿ ಇಬ್ಬರು ಸಾವನ್ನಪ್ಪಿದ್ರೆ, 33 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದ 8 ಸೋಂಕಿತರು ಜಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details