ಗದಗ:ಜಿಲ್ಲೆಯ ಒಟ್ಟು 19 ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ 11,084 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಆದರೆ, ಇವರಲ್ಲಿ 669 ವಿದ್ಯಾರ್ಥಿಗಳು ಗೈರಾಗಿದ್ದರಿಂದ 10,415 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ.
ಗದಗದಲ್ಲಿ 669 ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು..ಮರೆಯಾದ ಸಾಮಾಜಿಕ ಅಂತರ - ಗದಗ ಸುದ್ದಿ
ಗದಗ ಜಿಲ್ಲೆಯಲ್ಲಿ ಪಿಯು ಪರೀಕ್ಷೆ ಆರಂಭಕ್ಕೂ ಮೊದಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಮಾಯವಾಗಿತ್ತು.
![ಗದಗದಲ್ಲಿ 669 ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು..ಮರೆಯಾದ ಸಾಮಾಜಿಕ ಅಂತರ 669 PUC students Absent to examination in gadag](https://etvbharatimages.akamaized.net/etvbharat/prod-images/768-512-7671441-898-7671441-1592483275777.jpg)
ಗದಗ್ನಲ್ಲಿ 669 ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು..ಮರೆಯಾದ ಸಾಮಾಜಿಕ ಅಂತರ
ಬೆಳಗ್ಗೆ ಪರೀಕ್ಷೆ ಆರಂಭಕ್ಕೂ ಮೊದಲು ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಾಮಾಜಿಕ ಅಂತರ ಮಾತ್ರ ಮಾಯವಾಗಿತ್ತು. ಇನ್ನು, ನಗರದ ಜೆಟಿ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಹೈಟೆಂಪ್ರೇಚರ್ ಕಂಡು ಬಂದ ಹಿನ್ನೆಲೆ, ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಇನ್ನು, ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ತಮ್ಮೂರಿಗೆ ತೆರಳಲು ಸರಿಯಾದ ವಾಹನ ಸೌಕರ್ಯವಿಲ್ಲದೆ ಪರದಾಡಿದ ದೃಶ್ಯಗಳು ಕಂಡುಬಂದವು.