ಕರ್ನಾಟಕ

karnataka

ETV Bharat / state

ಮಾಂಸದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ದಾಳಿ: 6 ಮಂದಿ ವಶಕ್ಕೆ

ನಿಯಮ ಉಲ್ಲಂಘಿಸಿ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

gadag
ಮಾಂಸದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ದಾಳಿ: 6 ಮಂದಿ ವಶಕ್ಕೆ

By

Published : Apr 25, 2021, 10:19 AM IST

ಗದಗ: ನಿಯಮ ಮೀರಿ ತೆರೆದಿದ್ದ ಮಾಂಸದ ಅಂಗಡಿಗಳ ಮೇಲೆ ಬೆಳ್ಳಂಬೆಳಗ್ಗೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ 6 ಜನ ವ್ಯಾಪಾರಸ್ಥರನ್ನು ವಶಕ್ಕೆ ಪಡೆದಿರುವ ಘಟನೆ ನಗರದಲ್ಲಿ ನಡೆದಿದೆ.

ಇಂದು ಮಹಾವೀರ ಜಯಂತಿ ಹಿನ್ನೆಲೆ ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಎಲ್ಲಾ ಮಾಂಸದ ವ್ಯಾಪಾರಸ್ಥರ ಸಭೆ ಕರೆದು ಸೂಚನೆ ನೀಡಿತ್ತು. ಮಾಂಸ ಮಾರಾಟ ನಿರ್ಬಂಧಿಸಿ ನೋಟಿಸ್ ನೀಡಲಾಗಿತ್ತು. ಆದರೂ ನಿಯಮ ಉಲ್ಲಂಘಿಸಿ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ನಗರದ ಜವಳಿ ಗಲ್ಲಿ, ಮೆಹಬೂಬ್ ಸಾಬ್ ಕಟ್ಟೆ, ಮಾರ್ಕೆಟ್ ಏರಿಯಾದ ತ್ರಿವೇಣಿ ಹೋಟೆಲ್ ಬಳಿಯ 6ಕ್ಕೂ ಹೆಚ್ಚು ಮಟನ್ ಶಾಪ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ವಶಕ್ಕೆ ಪಡೆದ ಮಾಂಸವನ್ನು ನಗರದ ಹೊರವಲಯದಲ್ಲಿ ಡಂಪ್ ಮಾಡಿ ಬೀದಿ ನಾಯಿಗಳಿಗೆ ಹಾಕಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿದರೂ ಕೆಲವು ಕಡೆ ಇನ್ನೂ ಮಾಂಸದ ಅಂಗಡಿಗಳು ತೆರದಿದ್ದು, ಮಾಂಸಕ್ಕಾಗಿ ಜನ ಮುಗಿಬಿದ್ದಿದ್ದರು.

ABOUT THE AUTHOR

...view details