ಗದಗ: ಅವರೆ ಬೆಳೆ ತಿಂದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹರ್ತಿಯ ಹೊರವಲಯದಲ್ಲಿ ನಡೆದಿದೆ. ಶಿಂಗಟರಾಯನಕೆರೆ ನಿವಾಸಿ ಚಂದ್ರಪ್ಪ ಎಂಬುವವರಿಗೆ ಸೇರಿದ ಕುರಿತು ಎಂದು ತಿಳಿದು ಬಂದಿದೆ.
ಅವರೆ ಬೆಳೆ ಸೇವಿಸಿ 50ಕ್ಕೂ ಅಧಿಕ ಕುರಿಗಳ ಸಾವು - ಹರ್ತಿ ಅವರೆ ಕಾಳು ಬೆಳೆಯನ್ನು ಸೇವಿಸಿ 50ಕ್ಕೂ ಅಧಿಕ ಕುರಿಗಳು ಸಾವು
ಗದಗ ತಾಲೂಕಿನ ಹರ್ತಿ ಹೊರವಲಯದಲ್ಲಿ ಅವರೆ ಬೆಳೆ ತಿಂದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜರುಗಿದೆ. ಎಲ್ಲೆಂದರಲ್ಲಿ ಕುರಿಗಳು ಸತ್ತು ಬಿದ್ದಿವೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಭೇಟಿ ಪರಿಶೀಲನೆ ನಡೆಸಿದರು.
ಕುರಿಗಳು ಸಾವು
ಚಂದ್ರಪ್ಪ ತನ್ನ ಕುರಿಗಳನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದ. ಆ ಸಂದರ್ಭದಲ್ಲಿ ಕುರಿಗಳು ಅವರೆ ಬೆಳೆ ತಿಂದಿವೆ. ಇದರಿಂದ ಎಲ್ಲೆಂದರಲ್ಲಿ ಸತ್ತು ಬಿದ್ದಿವೆ. ಲಕ್ಷಾಂತರ ರೂ. ಮೌಲ್ಯದ ಕುರಿಗಳು ಸಾವನ್ನಪ್ಪಿದ್ದು, ಕುರಿಗಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.