ಗದಗ:ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಮುಂಡರಗಿಯ ತುಂಗಭದ್ರಾ ನದಿಯಿಂದ ಗದಗ, ಹುಬ್ಬಳ್ಳಿ-ಧಾರವಾಡಕ್ಕೆ ರಾತ್ರೋರಾತ್ರಿ ಮರಳು ಸಾಗಿಸುತ್ತಿರುವ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗದಗದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂತೋಷ್ ನೇತೃತ್ವದಲ್ಲಿ, ರಿಂಗ್ ರೋಡ್ ಬಳಿ ದಾಳಿ ಮಾಡಲಾಗಿದೆ. ಅಕ್ರಮ ಮರಳು ಸಾಗಾಟ ಆರೋಪದ ಮೇಲೆ ಮರಳು ಲಾರಿಗಳು ಹಾಗೂ ಚಾಲಕರನ್ನು ವಿಚಾರಣೆಗೆ ತಂದ ವೇಳೆ ವಾಹನಗಳ ಚಾಲಕರು ಹಾಗೂ ಮಾಲೀಕರು ಅಧಿಕಾರಿಗಳಿಗೇನೇ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ನಾವು ಜಿಪಿಎಸ್ ಡಿಸ್ಕನೆಕ್ಟ್ ಮಾಡಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಹಾಳಾದ್ರೆ ನಾವೇನ್ ಮಾಡೋಣ. ನೀವು ಯಾವ ಉದ್ದೇಶಕ್ಕೆ ನಮ್ಮ ವಾಹನಗಳನ್ನು ಹಿಡಿದ್ರಿ? ಪಾಸ್ ಇದ್ರೂ ಹೇಗೆ ಹಿಡಿದ್ರಿ? ನಿತ್ಯ ಎಲ್ಲಾ ವಾಹನಗಳನ್ನು ಹೀಗೆ ಹಿಡಿಯಬೇಕು. ಇಲ್ಲವಾದ್ರೆ, ಠಾಣೆ ಹೊರಗೆ ಹೋರಾಟ ಮಾಡ್ತೇವೆ ಅಂತೆಲ್ಲಾ ಅವಾಜ್ ಹಾಕಿದ್ದಾರಂತೆ.
ಯಾವುದಕ್ಕೂ ಬಗ್ಗದ ಅಧಿಕಾರಿಗಳು 5 ಮರಳು ಲಾರಿಗಳನ್ನು ವಶಕ್ಕೆ ಪಡೆದು, ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.