ಕರ್ನಾಟಕ

karnataka

ETV Bharat / state

ಗದಗದಲ್ಲಿ ಕೊರೊನಾಘಾತ: ಒಂದೇ ದಿನ 40 ಜನರಿಗೆ ಕೋವಿಡ್​ ಸೋಂಕು! - ಕೊರೊನಾ ಪಾಸಿಟಿವ್​

ಗದಗದಲ್ಲೂ ಕೊರೊನಾ ಆರ್ಭಟ ಜೋರಾಗಿದ್ದು, ದಿನದಿಂದ ದಿನಕ್ಕೆ ಅತಿ ಹೆಚ್ಚು ಕೋವಿಡ್​ ಪ್ರಕರಣ ಕಾಣಿಸಿಕೊಳ್ಳುತ್ತಿವೆ.

40 new corona  case
40 new corona case

By

Published : Jul 12, 2020, 2:26 AM IST

ಗದಗ: ಮುದ್ರಣ ಕಾಶಿ ಗದಗದಲ್ಲಿ ದಿನದಿಂದ ದಿನಕ್ಕೆ ಕೋವಿಡ್​ ಸೋಂಕಿತ ಪ್ರಕರಣದಲ್ಲಿ ಹೆಚ್ಚಳವಾಗ್ತಿದ್ದು, ನಿನ್ನೆ ಒಂದೇ ದಿನ 40 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತ ಪ್ರಕರಣ ಸಂಖ್ಯೆ ಇದೀಗ 302 ಆಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 165 ಜನ ಗುಣಮುಖರಾಗಿದ್ದು, ಸದ್ಯ 129 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

ಇಂದಿನ ಪ್ರಕರಣಗಳ ಮಾಹಿತಿ ಇಂತಿದೆ

ಬೆಟಗೇರಿಯ ಶರಣಬಸವೇಶ್ವರ ನಗರದ ನಿವಾಸಿ 20 ವರ್ಷದ ಪುರುಷ ಪಿ-35048 ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದ್ರೆ, ಗದಗ ನಗರದ ಚಾವಡಿ ಕೂಟದ ನಿವಾಸಿ 49 ವರ್ಷದ ಪುರುಷ ಪಿ-35049 ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ಪತ್ತೆಯಾಗಿದೆ.

ಗದಗ ಜಿಲ್ಲಾಧಿಕಾರಿ

ಗದಗ ನಗರದ ಕೇಶವನಗರದ ಪ್ರದೇಶದ ನಿವಾಸಿ 27 ವರ್ಷದ ಮಹಿಳೆ, ವಿಜಯಪುರ ಜಿಲ್ಲೆಯಿಂದ ಆಗಮಿಸಿದ ಗದಗ ನಗರದ ರಾಜೀವಗಾಂಧಿ ನಗರದ ನಿವಾಸಿ 45 ವರ್ಷದ ಪುರುಷ, ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 54 ವರ್ಷದ ಮಹಿಳೆ, ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 33 ವರ್ಷದ ಪುರುಷ, ಬೆಂಗಳೂರಿನಿಂದ ಆಗಮಿಸಿದ ಗಜೇಂದ್ರಗಡ ನಿವಾಸಿ 52 ವರ್ಷದ ಪುರುಷ, ಗೋವಾದಿಂದ ಜಿಲ್ಲೆಗೆ ಆಗಮಿಸಿದ ಗಜೇಂದ್ರಗಡದ ತಾಜ ಗಲ್ಲಿ ನಿವಾಸಿ 27 ವರ್ಷದ ಮಹಿಳೆ,ಗದಗ-ಬೆಟಗೇರಿ ನಗರದ ಸಿದ್ದರಾಮೇಶ್ವರ ನಗರದ ನಿವಾಸಿ 35 ವರ್ಷದ ಮಹಿಳೆ, ಗದಗ ನಗರದ ಮಾಬುಸಾಬನಿ ಕಟ್ಟಿ ನಿವಾಸಿ 33 ವರ್ಷದ ಪುರುಷ, ನಗರದ ರೆಹಮತ ನಗರ ನಿವಾಸಿ 21 ವರ್ಷದ ಪುರುಷ, ಬೆಟಗೇರಿಯ ಟರ್ನಲ್​ ಪೇಟ ನಿವಾಸಿ 45 ವರ್ಷದ ಮಹಿಳೆ,ಬೆಟಗೇರಿಯ ಮಂಜುನಾಥ ನಗರದ ನಿವಾಸಿ 50 ವರ್ಷದ ಪುರುಷ,ಗದಗದ ಕಣವಿ ಗ್ರಾಮದ ನಿವಾಸಿ 42 ವರ್ಷದ ಮಹಿಳೆ, ಖಾನತೋಟ ನಿವಾಸಿ 28 ವರ್ಷದ ಮಹಿಳೆ,ಎಸ್.ಎಂ.ಕೆ.ನಗರದ ನಿವಾಸಿ 24 ವರ್ಷದ ಪುರುಷ,ಬೆಟಗೇರಿಯ ವಕ್ಕಲಗೇರಿ ಓಣಿಯ ನಿವಾಸಿ 29 ವರ್ಷದ ಮಹಿಳೆ, ಕನ್ಯಾಳ ಅಗಸಿ ನಿವಾಸಿ 58 ವರ್ಷದ ಪುರುಷ,ಚಾಪೆಕರ್​ ಆಸ್ಪತ್ರೆಯ ಹತ್ತಿರದ ನಿವಾಸಿ 59 ವರ್ಷದ ಪುರುಷ,ಬೆಟಗೇರಿಯ ಎಸ್.ಎಂ.ಕೆ.ನಗರದ ನಿವಾಸಿ 44 ವರ್ಷದ ಪುರುಷ, ಗದಗ ನಗರದ ಖಾನತೋಟ ನಿವಾಸಿ 42 ವರ್ಷದ ಮಹಿಳೆ, ಜನತಾ ಬಜಾರ ನಿವಾಸಿ 38 ವರ್ಷದ ಪುರುಷ, ತ್ರಿಕೂಟೇಶ್ವರ ಮಂದಿರ ಹತ್ತಿರದ ನಿವಾಸಿ 73 ವರ್ಷದ ಪುರುಷ, ನರಗುಂದ ಗಾಡಿ ಓಣಿ ನಿವಾಸಿ 42 ವರ್ಷದ ಪುರುಷ, ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ, ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ನರಗುಂದದ ನಿವಾಸಿ 30 ವರ್ಷದ ಪುರುಷ, ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ, ರೋಣ ತಾಲೂಕಿನ ಯಾವಗಲ್ ಗ್ರಾಮದ ನಿವಾಸಿ 34 ವರ್ಷದ ಪುರುಷ, ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಮಹಿಳೆ, ಗದಗದ ದಾಸರ ಓಣಿ ನಗರದ ನಿವಾಸಿ 58 ವರ್ಷದ ಮಹಿಳೆ, ಹುಡ್ಕೋ ಕಾಲನಿ ಮೊದಲ ತಿರುವು ನಿವಾಸಿ 25 ವರ್ಷದ ಪುರುಷ, ಹಾತಲಗೇರಿ ನಾಕಾ ಪ್ರದೇಶದ ನಿವಾಸಿ 34 ವರ್ಷದ ಮಹಿಳೆ,ವಡ್ಡರಗೇರಿ ನಗರದ ನಿವಾಸಿ 38 ವರ್ಷದ ಮಹಿಳೆ, ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆ, ವಕ್ಕಲಗೇರಿ ನಿವಾಸಿ 38 ವರ್ಷದ ಮಹಿಳೆ,ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯಲ್ಲಿ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದ 28 ವರ್ಷದ ಮಹಿಳೆ, ಬೆಂಗಳೂರಿನಿಂದ ಆಗಮಿಸಿದ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ನಿವಾಸಿ 26 ವರ್ಷದ ಪುರುಷ, ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯಲ್ಲಿ ಫಾರ್ಮ್​ ಹೌಸ್​, ಹುಲಕೋಟಿ ಗ್ರಾಮದ ನಿವಾಸಿ 32 ವರ್ಷ ಪುರುಷ, ಹುಬ್ಬಳ್ಳಿಯಿಂದ ಆಗಮಿಸಿದ ನರಗುಂದದ ದಂಡಾಪುರ ಓಣಿ ನಿವಾಸಿ 35 ವರ್ಷದ ಪುರುಷ, ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 65 ವರ್ಷದ ಪುರುಷನಿಗೂ ಕೊರೊನಾ ದೃಢಪಟ್ಟಿದೆ. ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ABOUT THE AUTHOR

...view details