ಕರ್ನಾಟಕ

karnataka

ETV Bharat / state

ಗದಗ: ಕೊರೊನಾಗೆ ವೃದ್ಧೆ ಮೃತಪಟ್ಟ ಹಿನ್ನೆಲೆ ಗಲ್ಲಿಯ 374 ಮಂದಿ ಪರೀಕ್ಷೆಗೆ ಮುಂದಾದ ಜಿಲ್ಲಾಡಳಿತ! - 374 ಮಂದಿ ಪರೀಕ್ಷೆಗೆ ಮುಂದಾದ ಜಿಲ್ಲಾಡಳಿತ

ಇಂದು 45 ಮಂದಿಯನ್ನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಪ್ರಾಥಮಿಕ ಸಂಪರ್ಕ ಹೊಂದಿದ್ದ ‌72 ಮಂದಿ ವರದಿ ನೆಗೆಟಿವ್ ಬಂದಿದೆ.

374-persons-test-for-covid-19
374-persons-test-for-covid-19

By

Published : Apr 13, 2020, 7:53 PM IST

ಗದಗ:ಕೊರೊನಾ ಸೋಂಕಿತ ಅಜ್ಜಿ (ರೋಗಿ 166) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಂಕಿನ ಮೂಲ ಜಿಲ್ಲಾಡಳಿತಕ್ಕೆ ಕಗ್ಗಂಟಾಗಿಯೇ ಉಳಿದಿದೆ. ಅಜ್ಜಿ ಜೊತೆಗೆ 2ನೇ ಹಂತದ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಇಂದು 45 ಮಂದಿಯನ್ನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಪ್ರಾಥಮಿಕ ಸಂಪರ್ಕ ಹೊಂದಿದ್ದ ‌72 ಮಂದಿ ವರದಿ ನೆಗೆಟಿವ್ ಬಂದಿದೆ.

ರಂಗನವಾಡ ಗಲ್ಲಿಯಲ್ಲಿ ಒಟ್ಟು 374 ಜನರನ್ನು ಗುರುತಿಸಲಾಗಿದೆ. ಹಂತ ಹಂತವಾಗಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಬಳಿಕ ಅವರೆಲ್ಲರನ್ನೂ ಹೋಂ​​ ಕ್ವಾರಂಟೈನ್​​​ನಲ್ಲಿಡಲು ಸೂಚಿಸಲಾಗಿದೆ.

ABOUT THE AUTHOR

...view details