ಗದಗ : ಕೃಷಿ ಹೊಂಡದಲ್ಲಿನ ನೀರು ಕುಡಿದು 30 ಕುರಿಗಳು ಮೃತಪಟ್ಟಿರುವ ಘಟನೆ ರೋಣ ತಾಲೂಕಿನ ಕಲ್ಮಠ ಗ್ರಾಮದ ಬಳಿ ನಡೆದಿದೆ.
ಕುರಿಗಾಯಿ ರಮೇಶ್ ಮುಂದಿನಮನೆ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ರಮೇಶ್ ಮುಂದಿನಮನೆ ಬಾಗಲಕೋಟೆ ಜಿಲ್ಲೆ ಗುಳ್ಳೇದಗುಡ್ಡ ತಾಲೂಕಿನ ಹಾನಾಪೂರು ಗ್ರಾಮದವರು. ಬೇಸಿಗೆ ಕಾಲವಾಗಿದ್ದರಿಂದ ಗದಗ ಜಿಲ್ಲೆಯ ಬಹುತೇಕ ಜಮೀನುಗಳು ಬೆಳೆ ಕಟಾವ್ ಮಾಡಿ ಖಾಲಿಯಾಗಿರುತ್ತವೆ. ಹೀಗಾಗಿ, ಈ ಕಡೆ ಕುರಿ ಮೇಯಿಸಲು ಬಂದಿದ್ದರು. ರೋಣ ತಾಲೂಕಿನ ಹಳ್ಳಿಗಳಲ್ಲಿ ಕುರಿ ಮೇಯಿಸಿದ್ದಾರೆ. ಅದೇ ರೀತಿ ಮೇಲ್ಮಠ ಗ್ರಾಮದ ಬಳಿ ಕುರಿ ಮೇಯಿಸಲು ಬಂದಾಗ ಈ ಅನಾಹುತ ನಡೆದಿದೆ.