ಕರ್ನಾಟಕ

karnataka

ETV Bharat / state

ಗದಗದಲ್ಲಿ 7 ಸಿಬ್ಬಂದಿಗೆ ಕೊರೊನಾ: ಮೂರು ಪೊಲೀಸ್ ಠಾಣೆ ಸೀಲ್​​ಡೌನ್​​ - ಕೊರೊನಾ ವೈರಸ್​ ಅಪ್​ಡೇಟ್​

ಗದಗ ಜಿಲ್ಲಾ ಪೊಲೀಸ್ ಕಚೇರಿಯ ಸೈಬರ್ ಅಪರಾಧ ವಿಭಾಗದ ಮೂವರು ಸೇರಿದಂತೆ 7 ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ಮೂರು ಠಾಣೆಗಳನ್ನು ಸೀಲ್​ಡೌನ್​ ಮಾಡಲಾಗಿದೆ.

betageri police station sealdown
ಪೊಲೀಸ್ ಠಾಣೆ ಸೀಲ್​​ಡೌನ್​​

By

Published : Jul 16, 2020, 6:53 PM IST

ಗದಗ:ಜಿಲ್ಲಾ ಪೊಲೀಸ್ ಕಚೇರಿಯ ಸೈಬರ್ ಅಪರಾಧ ವಿಭಾಗದ ಮೂವರು ಸೇರಿದಂತೆ 7 ಸಿಬ್ಬಂದಿಗೆ ಕೊರೊನಾ ವಕ್ಕರಿಸಿಕೊಂಡಿದ್ದು, ಮೂರು ಪೊಲೀಸ್ ಠಾಣೆಗಳನ್ನು ಸೀಲ್​​ಡೌನ್​​ ಮಾಡಲಾಗಿದೆ.

ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಕಂಟ್ರೋಲ್ ರೂಮ್​​ ಸಿಬ್ಬಂದಿ ಹೊರತುಪಡಿಸಿ ಉಳಿದ ಸಿಬ್ಬಂದಿಗೆ ಕಚೇರಿ ಪ್ರವೇಶ ನಿರ್ಬಂಧಿಸಲಾಗಿದೆ. ಸೈಬರ್ ಅಪರಾಧ ವಿಭಾಗದ ಮೂವರಿಗೆ, ಬೆಟಗೇರಿ ಠಾಣೆಯ ಇಬ್ಬರಿಗೆ, ಶಹರ ಮತ್ತು ಸಂಚಾರಿ ಪೊಲೀಸ್ ಠಾಣೆಯ ತಲಾ ಒಬ್ಬರು ಕಾನ್ಸ್‌ಟೇಬಲ್​​​​​​ಗೆ ಕೊರೊನಾ ಸೋಂಕು ತಗುಲಿದೆ.

ಗದಗ ಜಿಲ್ಲಾ ಪೊಲೀಸ್ ಕಚೇರಿ

ಹೀಗಾಗಿ, ಸಂಚಾರಿ ಪೊಲೀಸ್ ಠಾಣೆಯನ್ನು ಪೊಲೀಸ್ ಕಲ್ಯಾಣ ಮಂಟಪಕ್ಕೆ, ಶಹರ ಪೊಲೀಸ್ ಠಾಣೆಯನ್ನು ರಾಜೀವ್​ಗಾಂಧಿ ನಗರ ಠಾಣೆಗೆ ಹಾಗೂ ಬೆಟಗೇರಿ ಪೊಲೀಸ್ ಠಾಣೆಯನ್ನು ಹೆಲ್ತ್ ಕ್ಯಾಂಪ್ ಸಮೀಪದ ಪೊಲೀಸ್ ಕ್ಯಾಂಟೀನ್ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

ನಾನು ಸುರಕ್ಷಿತವಾಗಿದ್ದೇನೆ. ನಮ್ಮೆಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದರೆ ಸಾಕು. ಸೋಂಕಿತ ಸಿಬ್ಬಂದಿ ಶೀಘ್ರ ಗುಣಮುಖರಾಗಲಿ. ಅವರ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಎಸ್ಪಿ ಯತೀಶ್​​ ಹೇಳಿದರು.

ABOUT THE AUTHOR

...view details