ಗದಗ:ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಂತಿಮವಾಗಿ 53 ಗ್ರಾಮ ಪಂಚಾಯತ್ಗಳ 801 ಸ್ಥಾನಗಳಿಗೆ 2,216 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮೊದಲ ಹಂತದಲ್ಲಿ ಗದಗ ತಾಲೂಕಿನ 26 ಗ್ರಾಮ ಪಂಚಾಯತ್ಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 207, ಅನುಸೂಚಿತ ಪಂಗಡದ 77, ಹಿಂದುಳಿದ ಅ ವರ್ಗ 216, ಹಿಂದುಳಿದ ಬ ವರ್ಗ 36, ಸಾಮಾನ್ಯ 653 ಒಟ್ಟು 1,189 ಅಭ್ಯರ್ಥಿಗಳಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ 13 ಗ್ರಾಮ ಪಂಚಾಯತ್ಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 144, ಅನುಸೂಚಿತ ಪಂಗಡದ 47, ಹಿಂದುಳಿದ ಅ ವರ್ಗ 55, ಹಿಂದುಳಿದ ಬ ವರ್ಗ 9, ಸಾಮಾನ್ಯ 257 ಒಟ್ಟು 512 ಅಭ್ಯರ್ಥಿಗಳಿದ್ದಾರೆ.