ಕರ್ನಾಟಕ

karnataka

ETV Bharat / state

ಗದಗ; ಡೆಂಗ್ಯೂ ಜೊತೆಗೆ ಕೊರೊನಾ ಕಾಟ.. 21 ವರ್ಷದ ಯುವಕ ಸಾವು - gadaga corona news

ಡೆಂಗ್ಯೂನಿಂದ ಬಳಲುತ್ತಿದ್ದ ಯುವಕನಿಗೆ ಪ್ಲೇಟ್​ಲೇಟ್ಸ್​​​ ಕೊರತೆಯಾಗಿತ್ತು, ಇದರ ಜೊತೆಗೆ 2 ದಿನದ ಹಿಂದೆ ಕೊರೊನಾ ಇರುವುದು ದೃಢಪಟ್ಟ ಹಿನ್ನೆಲೆ ಯುವಕ ಮೃತಪಟ್ಟಿದ್ದಾನೆ

21 year old young boy died
21 ವರ್ಷದ ಯುವಕ ಕೊರೊನಾಗೆ ಬಲಿ

By

Published : Jul 12, 2020, 9:47 PM IST

ಗದಗ :ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹಾಗೂಕೊರೊನಾ ಸೋಂಕಿತನಾಗಿದ್ದ 21 ವರ್ಷದ ಯುವಕನೋರ್ವ ಮೃತಪಟ್ಟಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.

ಭಜಂತ್ರಿ ಓಣಿಯ ನಿವಾಸಿ 21 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಇವರ ತಂದೆ ಜಿಮ್ಸ್ ಆಸ್ಪತ್ರೆಯಲ್ಲಿ ಸುಪರ್​ವೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಯಾರಿಗೂ ಕೊರೊನಾ ಸೋಂಕು ತಗುಲಿರಲಿಲ್ಲ. ಇವರ ತಂದೆಗೆ ಒಟ್ಟು ಮೂವರ ಮಕ್ಕಳ‌ ಪೈಕಿ ಮೃತ ಯುವಕ ಎರಡನೇ ಮಗನಾಗಿದ್ದಾನೆ.

ಡೆಂಗ್ಯೂನಿಂದ ಬಳಲುತ್ತಿದ್ದ ಯುವಕನಿಗೆ ಪ್ಲೇಟ್​ಲೆಟ್ಸ್​​​​​​ ಕೊರತೆಯಾಗಿತ್ತು, ಇದರ ಜೊತೆಗೆ ಎರಡು ದಿನಗಳ ಹಿಂದೆ ಕೊರೊನಾ ಇರುವುದು ದೃಢಪಟ್ಟಿತ್ತು.

ಈ ಕುರಿತು ಯುವಕನ ತಂದೆ ಈ ಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details