ಗದಗ:ಕೊರೊನಾ ಸೋಂಕಿತ 80 ವರ್ಷದ ವೃದ್ಧೆ ಸಾವು ಪ್ರಕರಣ ಹಿನ್ನೆಲೆ ಸದ್ಯ ಸೋಂಕಿನ ಮೂಲ ಹುಡುಕುವುದು ಜಿಲ್ಲಾಡಳಿತಕ್ಕೆ ಕಗ್ಗಂಟಾಗಿದೆ. ಅಜ್ಜಿ ಸಂಪರ್ಕದಲ್ಲಿದ್ದ 72 ಜನರ ವರದಿ ನೆಗೆಟಿವ್ ಅಂತ ಬಂದಿದೆ. ಆದ್ದರಿಂದಾಗಿ ಅಜ್ಜಿಗೆ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಕಾಡತೊಡಗಿದೆ.
ಗದಗ ವೃದ್ಧೆಯ ಸಂಪರ್ಕದಲ್ಲಿದ್ದ 21 ಜನ ಪರೀಕ್ಷೆಗಾಗಿ ಮತ್ತೆ ಜಿಮ್ಸ್ಗೆ ರವಾನೆ - Gadaga corona
ಗದಗನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 80 ವರ್ಷದ ವೃದ್ಧೆಯ ಸೋಂಕಿನ ಮೂಲ ಪತ್ತೆಗಾಗಿ ಅಜ್ಜಿಯ ಸಂಪರ್ಕದಲ್ಲಿದ್ದವರಿಗೆ 2ನೇ ಹಂತದ ಪರೀಕ್ಷೆ ನಡೆಸಲಾಗುತ್ತಿದೆ.
![ಗದಗ ವೃದ್ಧೆಯ ಸಂಪರ್ಕದಲ್ಲಿದ್ದ 21 ಜನ ಪರೀಕ್ಷೆಗಾಗಿ ಮತ್ತೆ ಜಿಮ್ಸ್ಗೆ ರವಾನೆ corona test](https://etvbharatimages.akamaized.net/etvbharat/prod-images/768-512-6792514-thumbnail-3x2-chaii.jpg)
ಮೃತ ಅಜ್ಜಿ ಸಂಪರ್ಕದಲ್ಲಿದ್ದ ಜನರನ್ನು ಈಗ 2ನೇ ಹಂತದ ಥ್ರೋಟ್ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಂದು ನಗರದ ಎಸ್.ಎಂ. ಕೃಷ್ಣಾ ಕಾಲೋನಿಯ 21 ಜನರನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೃತ ಸೋಂಕಿತ ವೃದ್ಧೆ ಕಳೆದ ಮಾರ್ಚ್ 23ರಂದು ಎಸ್.ಎಂ. ಕೃಷ್ಣಾ ಕಾಲೋನಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ನಂತರ ಬೇರೆಲ್ಲೂ ಹೊಗಿರಲಿಲ್ಲ. ಆದ್ದರಿಂದ ಅಜ್ಜಿ ಸೋಂಕಿನ ಮೂಲ ಪತ್ತೆಗಾಗಿ 2ನೇ ಹಂತದ ಥ್ರೋಟ್ ಸ್ವ್ಯಾಬ್ ಪಡೆದ ಬಳಿಕ ಆ ಜನರನ್ನು ಹೋಂ ಕ್ವಾರಂಟೈನ್ಗೆ ರವಾನೆ ಮಾಡಲಾಗುತ್ತಿದೆ.
ಈಗಾಗಲೇ ಆರೋಗ್ಯ ಇಲಾಖೆ ಎಸ್.ಎಂ. ಕೃಷ್ಣಾ ಕಾಲೋನಿಯ 200ಕ್ಕೂ ಅಧಿಕ ಜನರನ್ನು ಗುರುತಿಸಿದ್ದು, ಹಂತ ಹಂತವಾಗಿ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.