ಕರ್ನಾಟಕ

karnataka

ETV Bharat / state

200 ತೊಲೆ, 20 ಕೋಣೆ.. ಶತಮಾನ ಕಳೆದರೂ ಮುಕ್ಕಾಗದ ಮನೆ - 200 Year Old House

ಬಹುತೇಕವಾಗಿ ನಮ್ಮೆಲ್ಲರ ಮನೆ ಅಬ್ಬಬ್ಬಾ ಅಂದರೆ 50 ವರ್ಷದಿಂದ 100 ವರ್ಷ ಬಾಳಿಕೆ ಬರಬಹುದು. ಆದರೆ, ಇಲ್ಲೊಂದು ಮನೆ ಇದ್ದು, ಅದು ಬರೋಬ್ಬರಿ 200 ವರ್ಷಗಳೇ ಕಳೆದಿದ್ದರೂ ಇಂದಿಗೂ ಗಟ್ಟಿಮುಟ್ಟಾಗಿದ್ದು, ಆಧುನಿಕ ತಂತ್ರಜ್ಞಾನಕ್ಕೆ ಸವಾಲೊಡ್ಡಿದೆ.

200 Year Old House  A Challenge For Engineers
ಶತಮಾನ ಕಳೆದರೂ ಮುಕ್ಕಾಗದ ಮನೆ

By

Published : Apr 10, 2021, 5:51 AM IST

ಗದಗ:ಪ್ರತಿಯೊಬ್ಬರೂ ತಮ್ಮ ಕುಟುಂಬಕ್ಕಾಗಿ ಸುಂದರವಾದ ಮನೆ ಕಟ್ಟಬೇಕು ಎಂದು ಕನಸು ಕಾಣುತ್ತಾರೆ. ಆದರೆ, ಮನೆ ಕಟ್ಟೋದು ಒಂದು ಕನಸಾದರೆ, ಕಟ್ಟಿರುವ ಮನೆಯನ್ನು ಬಹಳ ವರ್ಷಗಳ ಕಾಲ ಉಳಿಸಿಕೊಂಡು ಹೋಗುವುದು ಅದಕ್ಕಿಂತಲೂ ದೊಡ್ಡ ಜವಾಬ್ದಾರಿಯಾಗಿದೆ. ಬಹುತೇಕವಾಗಿ ನಮ್ಮೆಲ್ಲರ ಮನೆ ಅಬ್ಬಬ್ಬಾ ಅಂದರೆ 50 ವರ್ಷದಿಂದ 100 ವರ್ಷ ಬಾಳಿಕೆ ಬರಬಹುದು. ಆದರೆ ಇಲ್ಲೊಂದು ಮನೆ ಇದ್ದು, ಅದು ಬರೋಬ್ಬರಿ 200 ವರ್ಷಗಳೇ ಕಳೆದಿದ್ದರೂ ಇಂದಿಗೂ ಗಟ್ಟಿಮುಟ್ಟಾಗಿದ್ದು, ಆಧುನಿಕ ತಂತ್ರಜ್ಞಾನಕ್ಕೆ ಸವಾಲೊಡ್ಡಿದೆ.

ಶತಮಾನ ಕಳೆದರೂ ಮುಕ್ಕಾಗದ ಮನೆ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಮನೋಹರ್​ ವಸ್ತ್ರದ ಎಂಬುವವರು ವಾಸವಾಗಿರುವ ಈ ಮನೆ ಸುಮಾರು 200 ವರ್ಷಗಳ ಹಳೆ ಮನೆಯಾಗಿದೆ. ಚೆನ್ನವೀರಯ್ಯ ವಸ್ತ್ರದ ಎಂಬುವವರು ಮನೆಯ ಮೂಲ ಪುರುಷರಾಗಿದ್ದಾರೆ. ಸದ್ಯ ಮನೆಯಲ್ಲಿ ನಾಲ್ಕನೇ ತಲೆಮಾರಿನವರು ವಾಸವಾಗಿದ್ದು, ಇಂದಿಗೂ ಮನೆ ಮುಕ್ಕಾಗದೇ ಗಟ್ಟಿಮುಟ್ಟಾಗಿದೆ. ಸುಮಾರು 2 ಎಕರೆ ವಿಸ್ತೀರ್ಣದಲ್ಲಿ ಮನೆ ನಿರ್ಮಾಣವಾಗಿದ್ದು, ಮಣ್ಣಿನಿಂದ ಗೋಡೆಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಮೇಲ್ಮುದ್ದೆಯಿಂದ ನಿರ್ಮಿಸಿದ್ದು ಯಾವುದೇ ಸಿಮೆಂಟ್, ಕಾಂಕ್ರೀಟ್​ ಬಳಸದಿರುವುದು ವಿಶೇಷ.

ಹೊರಗಿನಿಂದ ಭವ್ಯವಾಗಿ ಕಾಣುವ ಈ ಮನೆಯಲ್ಲಿ 200 ತೊಲೆಗಳಿದ್ದು, ಸುಮಾರು 20 ಕೋಣೆಗಳಿವೆ. ಮನೆಯಲ್ಲಿ 15 ಬಾಗಿಲುಗಳಿದ್ದು, 20 ಅಂಕಣಗಳನ್ನು ಹೊಂದಿರುವ ಈ ಮನೆ ಅರಮನೆಯಂತೆ ಕಂಗೊಳಿಸುತ್ತದೆ. ಈ ಮನೆಯನ್ನು ನಿರ್ಮಿಸಲು ತೇಗದ ಮರವನ್ನು ಬಳಸಲಾಗಿದ್ದು, ಇಂದಿಗೂ ಹುಳು ಹತ್ತಿಲ್ಲ. ಮನೆಯಲ್ಲಿನ ಗೋಡೆಗಳು ಸುಮಾರು 20 ರಿಂದ 30 ಅಡಿಯಿದ್ದು, ಹಾಗಾಗಿ ಬಹಳಷ್ಟು ವರ್ಷಗಳ ಕಾಲ ಬಾಳಿಕೆ ಬಂದಿದೆ. ಮನೆಯನ್ನು ಮಣ್ಣಿನಿಂದ ನಿರ್ಮಾಣ ಮಾಡಿರುವುದರಿಂದ ಒಳಗೆ ಪ್ರವೇಶಿಸುತ್ತಿದ್ದಂತೆ ತಂಪಾದ ಅನುಭವವಾಗುತ್ತದೆ.

ಮನೋಹರ್ ವಸ್ತ್ರದ ಅವರದ್ದು ಅವಿಭಕ್ತ ಕುಟುಂಬವಾಗಿದ್ದು, ಸುಮಾರು 50 ಜನ ವಾಸ ಮಾಡುತ್ತಿದ್ದು, ಇಂದಿಗೂ ಕೂಡಿ ಸಹಬಾಳ್ವೆ ಮಾಡುತ್ತಿದ್ದಾರೆ. ಇವರ ಬಳಿ ಸುಮಾರು 100 ಎಕರೆ ಜಮೀನು ಇದ್ದು, ಕುಟುಂಬಸ್ಥರು ಇದರಲ್ಲಿಯೇ ಉಳುಮೆ ಮಾಡುತ್ತಿದ್ದಾರೆ. ಕುಟುಂಬದ ಕೆಲವರು ನೌಕರಿ ಅಂತ ಬೇರೆ ಬೇರೆ ಊರುಗಳಲ್ಲಿ ವಾಸವಾಗಿದ್ದು, ಹಬ್ಬ-ಹರಿದಿನ, ಜಾತ್ರೆ ಇದ್ದ ವೇಳೆ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರಂತೆ. ಈ ಮನೆಯಲ್ಲಿ ಹಳೆಯ ಕಾಲದ ಐದು ಒಲೆಗಳು ಈಗಲೂ ಇವೆ. ಅದರಲ್ಲಿಯೇ ಇಂದಿಗೂ ಅಡಿಗೆ ಮಾಡುತ್ತಾರಂತೆ.

ಇಷ್ಟೊಂದು ವಿಸ್ತಾರವಾದ ಮನೆಯನ್ನು ಸ್ವಚ್ಛ ಮಾಡುವುದು ಕಷ್ಟಸಾಧ್ಯ, ಆದರೆ ಮನೆಯಲ್ಲಿರುವ ಹೆಣ್ಣುಮಕ್ಕಳು ಇದಕ್ಕೆ ಹೊಂದಿಕೊಂಡಿದ್ದಾರೆ. ಸ್ವಚ್ಛ ಮಾಡುವುದು ಕಷ್ಟ, ಆದರೂ ಇಷ್ಟಪಟ್ಟು ಮಾಡುತ್ತೇವೆ ಎಂದು ಮನೆಯ ಹೆಣ್ಣುಮಕ್ಕಳು ಹೇಳುತ್ತಾರೆ. 200 ವರ್ಷ ಹಳೆಯ ಮನೆಯಾಗಿದ್ದರೂ ಈಗಿನ ಕಾಲಕ್ಕೆ ಈ ಮನೆ ಸುಮಾರು 5 ರಿಂದ 6 ಕೋಟಿ ರೂ. ಬೆಲೆ ಬಾಳುತ್ತದೆ.

ABOUT THE AUTHOR

...view details