ಗದಗ:ಜಿಲ್ಲೆಯಲ್ಲಿಂದು 2 ಹೊಸ ಕೊರೊನಾ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.
ತಾಲೂಕಿನ ಹರ್ತಿ ಗ್ರಾಮದ 81 ವರ್ಷದ ವೃದ್ಧ ಹಾಗೂ 24 ವರ್ಷದ ಪುರುಷನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಇಬ್ಬರಿಗೂ ಧಾರವಾಡ ಮೂಲದ ಪಿ-6255 (45 ವರ್ಷ)ರವರ ಸಂಪರ್ಕದಿಂದ ಸೋಂಕು ತಗುಲಿದೆ.

ಪಿ-6255 ಇವರು ಧಾರವಾಡದಿಂದ ತಮ್ಮ ಪತ್ನಿಯ ತವರು ಮನೆ (ಹರ್ತಿ ಗ್ರಾಮಕ್ಕೆ)ಗೆ ದಿನಾಂಕ 06-06-2020ರಂದು ಆಗಮಿಸಿದ್ದರು. ಬಳಿಕ ದಿನಾಂಕ 12 ರಂದು ಪಿ-6255ಗೆ ಸೋಂಕು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ, ಅವರೆಲ್ಲರನ್ನೂ ನಿಗಾದಲ್ಲಿರಿಸಿ, ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಹರ್ತಿ ಗ್ರಾಮದ ಈ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಸದ್ಯ ಈ ಇಬ್ಬರು ಸೋಂಕಿತರನ್ನು ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 60 ಸೋಂಕಿತರ ಪೈಕಿ, 44 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರಿದ್ದಾರೆ. ಸದ್ಯ 14 ಜನ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.