ಕರ್ನಾಟಕ

karnataka

ETV Bharat / state

ಗದಗನಲ್ಲಿ ಕೊರೊನಾ ಸೋಂಕಿನಿಂದ ಇಬ್ಬರು ಗುಣಮುಖ - Corona virus

ಕೋವಿಡ್ ಸೋಂಕಿನಿಂದಾಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

2 corona patient cured in gadag
2 corona patient cured in gadag

By

Published : Jun 16, 2020, 5:29 PM IST

ಗದಗ: ಕೊರೊನಾದಿಂದ ಗುಣಮುಖರಾದ ಇಬ್ಬರನ್ನು ಇಂದು ಜಿಮ್ಸ್ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಮಹಾರಾಷ್ಟ್ರದಿಂದ ಹಿಂದಿರುಗಿದ 59 ವರ್ಷದ ಪಿ-5383 ಪುರುಷ ಮತ್ತು 49 ವರ್ಷದ ಪಿ-5384 ಮಹಿಳೆಯಲ್ಲಿ ಸೋಂಕು ಕಂಡುಬಂದ ಹಿನ್ನೆಲೆ, ಜೂನ್ 6 ರಂದು ಜಿಮ್ಸ್ ಕೋವಿಡ್​ ಪ್ರತ್ಯೇಕತಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯ ನಂತರ ಜೂನ್ 15ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ಅವರ ಗಂಟಲು ದ್ರವ ಪರೀಕ್ಷೆಯ ವರದಿ ನೆಗಟಿವ್ ಬಂದಿದೆ. ಅದಕ್ಕಾಗಿ ಜೂನ್ 16(ಇಂದು) ಗುಣಮುಖ ಪ್ರಕರಣವೆಂದು ಬಿಡುಗಡೆ ಮಾಡುತ್ತಿದ್ದೇವೆ. ಅಲ್ಲದೆ ಮುಂದಿನ 14 ದಿನಗಳ ಕಾಲ ಮನೆಯಲ್ಲಿಯೇ ಇರಲು ಹಾಗೂ ಆರೋಗ್ಯದಲ್ಲಿ ಏನಾದರೂ ತೊಂದರೆ ಆದಲ್ಲಿ ನಮ್ಮನ್ನು ಸಂಪರ್ಕಿಸಲು ಸೂಚನೆ ನೀಡಲಾಗಿದೆ. ಅವರ ಮೇಲೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ನಿರಂತರ ನಿಗಾ ವಹಿಸಲಿದ್ದಾರೆ ಎಂದು ಜಿಮ್ಸ್ ನಿರ್ದೇಶಕ ಡಾ. ಭೂಸರಡ್ಡಿ ತಿಳಿಸಿದ್ದಾರೆ.

ABOUT THE AUTHOR

...view details