ಗದಗ: 17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ಬಿಂಕದಕಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯಯವ ಈ ಕ್ರೀಡಾಕೂಟದ ಮೊದಲ ದಿನವೇ ಗದಗನ ಬಾಲಕಿ ಪದಕ ಗಳಿಸಿದ್ದಾಳೆ.
16 ವರ್ಷದ ಬಾಲಕಿಯರಿಗಾಗಿ ನಡೆದ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿ.ಮೀ. 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಕು.ಪವಿತ್ರಾ ಕುರ್ತಕೋಟಿ (41ನಿ.4ಸೆ) ನಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾಳೆ.
ಶುಕ್ರವಾರ 14 ಮತ್ತು 16 ವರ್ಷದ ಬಾಲಕ ಮತ್ತು ಬಾಲಕಿಯರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ನಡೆಯಿತು. ಅದರಂತೆ, 18 ವರ್ಷದ ಬಾಲಕರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 18.4 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ಜರುಗಿತು.
14 ವರ್ಷದವರ ಬಾಲಕರ ವಿಭಾಗ :ಮಹಾರಾಷ್ಟ್ರದ ಅದೀಪ ವಘಾ(ಪ್ರಥಮ), ಕರ್ನಾಟಕದ ಸಮರಪನ ಜೈನ್(ದ್ವಿತೀಯ), ಅಸ್ಸೋಂನ ಮಲವ ದತ್ತಾ (ತೃತೀಯ).