ಗದಗ: ಜಿಲ್ಲೆಯಲ್ಲಿ ಇಂದು ಹೊಸದಾಗಿ 162 ಜನರನ್ನು ಸೇರಿಸಿ 1,759 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಗದಗದಲ್ಲಿ ಇಂದು ಹೊಸದಾಗಿ 162 ಮಂದಿ ಸೇರಿಸಿ 1,759 ಜನರ ಮೇಲೆ ನಿಗಾ: ಡಿಸಿ - ಕೊರೊನಾ ಲೆಟೆಸ್ಟ್ ಅಪ್ಡೇಟ್
ಗದಗದಲ್ಲಿ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿಗಳು 1830. ಆ ಪೈಕಿ 1514 ವರದಿಗಳು ನೆಗೆಟಿವ್ ಬಂದಿದ್ದು, 60 ವರದಿಗಳು ತಿರಸ್ಕೃತಗೊಂಡಿವೆ. ಇನ್ನೂ 251 ವರದಿಗಳು ಬಾಕಿ ಇವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ 28 ದಿನಗಳ ನಿಗಾ ಅವಧಿ ಪೂರೈಸಿದವರು 284 ಮಂದಿ ಹಾಗೂ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 1444 ಜನರು. ಇನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ 21 ಜನರಿದ್ದಾರೆ ಎಂದರು. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿಗಳು 1830. ಆ ಪೈಕಿ 1514 ವರದಿಗಳು ನೆಗೆಟಿವ್ ಬಂದಿದ್ದು, 60 ವರದಿಗಳು ತಿರಸ್ಕೃತಗೊಂಡಿವೆ. 251 ವರದಿಗಳು ಬಾಕಿ ಇವೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪಿ-166, ಪಿ-304, ಪಿ-370, ಪಿ-396, ಪಿ-514 ಒಟ್ಟು 5 ಕೊವಿಡ್-19 ಪ್ರಕರಣಗಳು ಧೃಢಪಟ್ಟಿವೆ. ಈ ಪೈಕಿ ಪಿ-166 ಮೃತಪಟ್ಟಿದ್ದು, ಪಿ-304 ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.