ಗದಗ: ಅತಿಯಾದ ಮಳೆಯ ವಾತಾವರಣಕ್ಕೆ 150ಕ್ಕೂ ಹೆಚ್ಚು ಗೋವುಗಳು ಸಾವನಪ್ಪಿವೆ. ಪಶು ವೈದ್ಯರನ್ನು ಸಂಪರ್ಕಿಸಿದರೂ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಗೋವು ಮಾಲಿಕರ ದೂರಾಗಿದೆ.
ಕಣ್ಣುಬೇನೆ, ಚರ್ಮ ರೋಗದಿಂದ ಸಾವನಪ್ಪುತ್ತಿರುವ ಗೋವುಗಳು ತಾಲೂಕಿನ ಮುಂಡರಗಿಯ ಕಪ್ಪತ್ತಗುಡ್ಡದಲ್ಲಿ ಘಟನೆ ಈ ಘಟನೆ ನಡೆದಿದೆ. ಇವೆರೆಲ್ಲ ಕೊಪ್ಪಳ ಜಿಲ್ಲೆ ಕಾಮನೂರ ಹಾಗೂ ಹಾಲವರ್ತಿ ಗ್ರಾಮದಿಂದ ಸಾವಿರಾರು ಜಾನುವಾರುಗಳನ್ನು ಮೇಯಿಸಲು ಕಪ್ಪತ್ತಗುಡ್ಡದಲ್ಲಿ ನೆಲೆಸಿದ್ದರು.
ಕಣ್ಣುಬೇನೆ ಹಾಗೂ ಚರ್ಮರೋಗ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಗೋವುಗಳಿಗೆ ಶೀಘ್ರವೇ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡರು. ಮೇವು ಸಿಗುವ ಕಡೆ ವಲಸೆ ಹೋಗುವ ಜಾನುವಾರುಗಳು ಹಾಗೂ ಗೋಪಾಲಕರು ವರ್ಷವಿಡೀ ಸಂಚಾರದಲ್ಲಿಯೇ ಇರುತ್ತಾರೆ.
ಹೀಗೆ ಮುಂದುವರೆದರೆ ನಾವೂ ಅವುಗಳ ಜತೆ ಪ್ರಾಣ ಬಿಡಬೇಕಾಗುತ್ತದೆ ಎನ್ನುತ್ತಾರೆ ಗೋಪಾಲಕರು.