ಗದಗ:ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಕೊರೊನಾ ಮಹಾ ಸ್ಫೋಟವಾಗಿದ್ದು, ಇಂದು 15 ಕೊರೊನಾ ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ.
ಗದಗ ಜಿಲ್ಲೆಯಲ್ಲಿ ಇಂದು 15 ಕೊರೊನಾಕೇಸ್ ಪತ್ತೆ! - ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ
ಗದಗ ಜಿಲ್ಲೆಯಲ್ಲಿ ಕೊರೊನಾ ಮಹಾ ಸ್ಫೋಟವಾಗಿದ್ದು, ಇಂದು 15 ಕೊರೊನಾ ಪಾಸಿಟಿವ್ ಕೇಸ್ಗಳು ದೃಢಪಟ್ಟಿವೆ. ಒಟ್ಟು 35 ಸೋಂಕಿತರ ಪೈಕಿ ಒಬ್ಬರು ಮೃತಪಟ್ಟಿದ್ದು, 5 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
P-1932, P-1933, P-1934, P-1935, P-1936, P-1937, P-1938, P-1794, P-1795 ಇವರಿಗೆ P-913 ಸಂಪರ್ಕದಿಂದ ಸೋಂಕು ತಗುಲಿದೆ. ಇವರೆಲ್ಲಾ ಗದಗ ನಗರದ ಗಂಜಿ ಬಸವೇಶ್ವರ ಓಣಿಯರಾಗಿದ್ದಾರೆ. P-1744, P-1745 ಗುಜರಾತ್ ಪ್ರವಾಸದಲ್ಲಿದ್ದ ಸೋಂಕಿತರಾಗಿದ್ದು, P-1746, P-1747, P-1748 ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ ಉಳ್ಳವರಾಗಿದ್ದಾರೆ.
ಇದರಲ್ಲಿ ಇಬ್ಬರು ಬಾಲಕರು ಸೇರಿದಂತೆ ಒಟ್ಟು 6 ಜನ ಅಪ್ರಾಪ್ತರಿಗೆ ಸೋಂಕು ತಗುಲಿದೆ. ಅಹಮದಾಬಾದ್ನಿಂದ ಬಂದ ಇಬ್ಬರು, ಅಜ್ಮೀರ್ದಿಂದ ಬಂದ ಒಬ್ಬರು ಹಾಗೂ ಮುಂಬೈನ ಥಾಣೆಯಿದ ಬಂದ ಮೂವರಲ್ಲಿ ಕೊರೊನಾ ದೃಢಪಟ್ಟಿದೆ. ಒಟ್ಟು 35 ಸೋಂಕಿತರ ಪೈಕಿ ಒಬ್ಬರು ಮೃತಪಟ್ಟು, 5 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದ್ದು, ಇವರೆಲ್ಲರಿಗೂ ಜಿಮ್ಸ್ನ ಕೊರೊನಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.