ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಸಿಬಿಐ ತನಿಖೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಇಂದು ಕೂಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಯೋಗೀಶ್ ಗೌಡ ಕೊಲೆ ಪ್ರಕರಣ: ಜಿ.ಪಂ ಉಪಾಧ್ಯಕ್ಷ ಕರಿಗಾರ ಮತ್ತೊಮ್ಮೆ ಸಿಬಿಐ ವಿಚಾರಣೆಗೆ ಹಾಜರು - ಧಾರವಾಡ ಕ್ರೈಂ ಸುದ್ದಿ
ಹೆಬ್ಬಳ್ಳಿ ಜಿ.ಪಂ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರರನ್ನು ಮತ್ತೆ ಸಿಬಿಐ ವಿಚಾರಣೆಗೆ ಕರೆಸಿಕೊಂಡಿದೆ.
ಜಿ.ಪಂ ಉಪಾಧ್ಯಕ್ಷ ಕರಿಗಾರ ವಿಚಾರಣೆಗೆ ಹಾಜರು
ಈಗಾಗಲೇ ಎರಡು ಮೂರು ಬಾರಿ ಸಿಬಿಐ ವಿಚಾರಣೆ ಎದುರಿಸಿರುವ ಶಿವಾನಂದ ಕರಿಗಾರರನ್ನು ಇಂದು ಮತ್ತೆ ಸಿಬಿಐ ವಿಚಾರಣೆಗೆ ಕರೆಸಿಕೊಂಡಿದೆ. ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಸಿಬಿಐ ವಿಚಾರಣೆ ನಡೆಯುತ್ತಿದೆ.
ಈಗಾಗಲೇ ವಿಚಾರಣೆ ವೇಗ ಪಡೆದುಕೊಂಡಿದ್ದು, ಮತ್ತಷ್ಟು ಜನರನ್ನು ಕರೆಸಿ ವಿಚಾರಣೆ ಮಾಡುವ ಸಾಧ್ಯತೆಯಿದೆ.