ಕರ್ನಾಟಕ

karnataka

ETV Bharat / state

ಭೂಸ್ವಾಧೀನಕ್ಕೆ ಪರಿಹಾರ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್​ ಇಂಜಿನಿಯರ್ ಕಚೇರಿ ಜಪ್ತಿ

ಧಾರವಾಡದಲ್ಲಿ ಭೂ ಸ್ವಾಧೀನಕ್ಕೆ ಹೆಚ್ಚುವರಿ ಪರಿಹಾರ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಚೇರಿಯನ್ನು ಜಪ್ತಿ ಮಾಡಲಾಗಿದೆ.

zilla-panchayat-raj-engineers-office-was-confiscated-in-dharwad
ಭೂಸ್ವಾಧೀನಕ್ಕೆ ಪರಿಹಾರ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್​ ಇಂಜಿನಿಯರ್ ಕಚೇರಿ ಜಪ್ತಿ

By

Published : Sep 13, 2022, 5:51 PM IST

ಧಾರವಾಡ: ಭೂಸ್ವಾಧೀನ ಪರಿಹಾರ ನೀಡದಿರುವುದಕ್ಕಾಗಿ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಕಚೇರಿಯನ್ನು ನ್ಯಾಯಾಲಯವು ಜಪ್ತಿ ಮಾಡುವಂತೆ ಆದೇಶಿಸಿದ ಹಿನ್ನಲೆ, ಕಚೇರಿಯಲ್ಲಿನ ಕಂಪ್ಯೂಟರ್, ಪ್ರಿಂಟರ್, ಕುರ್ಚಿಗಳನ್ನು ಜಪ್ತಿ ಮಾಡಲಾಗಿದೆ.

ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳದ ರೈತರಾದ ವಿರೂಪಾಕ್ಷಪ್ಪ ಕೊಳ್ಳಿಯವರ ಹಾಗೂ ನಾಗವ್ವ ಕೇರಿ ಎಂಬುವವರಿಂದ 6 ಎಕರೆ 30 ಗುಂಟೆ ಜಮೀನನ್ನು ಕುಡಿಯುವ ನೀರಿಗಾಗಿ ಪಡೆದುಕೊಳ್ಳಲಾಗಿತ್ತು. ಆದರೆ, ಭೂ ಸ್ವಾಧೀನಪಡಿಸಿಕೊಂಡವರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆ ವಿಭಾಗವನ್ನು ಜಪ್ತಿ ಮಾಡುವಂತೆ ನ್ಯಾಯಾಲಯ‌ ಆದೇಶಿಸಿತ್ತು.

ಭೂಸ್ವಾಧೀನಕ್ಕೆ ಪರಿಹಾರ ನೀಡದ ಹಿನ್ನೆಲೆ ಜಿಲ್ಲಾ ಪಂಚಾಯತ್ ರಾಜ್​ ಇಂಜಿನಿಯರ್ ಕಚೇರಿ ಜಪ್ತಿ

ಭೂ ಸ್ವಾಧೀನ ಪಡಿಸಿಕೊಂಡಿದ್ದಕ್ಕಾಗಿ 2012ರಲ್ಲಿ ಕೇವಲ 78 ಲಕ್ಷ ಪರಿಹಾರ ನೀಡಲಾಗಿತ್ತು. ಈ ಬಗ್ಗೆ ಕಡಿಮೆ ಪರಿಹಾರ ನೀಡಲಾಗಿದೆ ಎಂದು ರೈತರು ಕೋರ್ಟ್ ಮೊರೆ ಹೋಗಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಧಾರವಾಡದ 2ನೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಕಳೆದ ವರ್ಷವೇ 2.65 ಕೋಟಿ ಪರಿಹಾರ ನೀಡಬೇಕು ಆದೇಶ ಮಾಡಿತ್ತು. ಆದೇಶ ನೀಡಿ ಒಂದು ವರ್ಷ ಕಳೆದರೂ ಪರಿಹಾರ ನೀಡದ ಹಿನ್ನೆಲೆ ಕಚೇರಿ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ :ದಸರಾ ರಜೆ ದಿನಾಂಕ ನಿಗದಿ: ದಕ್ಷಿಣ ಕನ್ನಡ ಶಾಲೆಗಳ ರಜೆ ದಿನಾಂಕದಲ್ಲಿ ಬದಲಾವಣೆ

ABOUT THE AUTHOR

...view details