ಕರ್ನಾಟಕ

karnataka

ETV Bharat / state

ಸಿಎಂಗಾಗಿ ಜಿರೋ ಟ್ರಾಫಿಕ್ ... ಪರದಾಡಿದ 2 ಆಂಬ್ಯುಲೆನ್ಸ್​ಗಳು - Av

ಜಿರೋ ಟ್ರಾಫಿಕ್ ಅನ್ನೋ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಎಷ್ಟು ಪರದಾಡಬೇಕಾಗುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ಇಂದು ಸಿಎಂಗಾಗಿ ಹುಬ್ಬಳ್ಳಿಯಲ್ಲಿ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ 2 ಆಂಬ್ಯುಲೆನ್ಸ್​ಗಳು ಟ್ರಾಫಿಕ್ ‌ಮಧ್ಯೆ ಸಿಲುಕಿ ಪರದಾಡಿವೆ.

ಆಂಬ್ಯುಲೆನ್ಸ್​ಗಳು

By

Published : May 14, 2019, 6:19 AM IST

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿಗಾಗಿ ಜಿರೋ ಟ್ರಾಫಿಕ್ ಮಾಡಿದ ಪರಿಣಾಮ ಎರಡು ಆಂಬ್ಯುಲೆನ್ಸ್​ಗಳು ಟ್ರಾಫಿಕ್ ‌ಮಧ್ಯೆ ಸಿಲುಕಿ ‌ಪರದಾಡಿದ ಘಟನೆ ವರೂರು ಬಳಿ ನಡೆಯಿತು.

ಟ್ರಾಫಿಕ್ ‌ಮಧ್ಯೆ ಸಿಲುಕಿದ ಆಂಬ್ಯುಲೆನ್ಸ್​ಗಳು

ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮ ಶಿವಳ್ಳಿ ಪರ ವರೂರು ಗ್ರಾಮದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆ ಮುಗಿಸಿ ಹುಬ್ಬಳ್ಳಿಗೆ ಆಗಮಿಸುವಾಗ ಸಿಎಂಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.‌ ಸಿಎಂ ಜಿರೋ ಟ್ರಾಫಿಕ್ ಎಫೆಕ್ಟ್ ಆಂಬ್ಯುಲೆನ್ಸ್​ಗೆ ತಟ್ಟಿತ್ತು. ವರೂರು ಬಳಿ ಸುಮಾರು 20 ನಿಮಿಷ ಎರಡು 108 ಆಂಬ್ಯುಲೆನ್ಸ್​ಗಳು ರಸ್ತೆಯಲ್ಲಿ ಕಾಯುವಂತಾಯಿತು. ಇದರಿಂದಾಗಿ ಸಾರ್ವಜನಿಕರು ಹಾಗೂ ಆಂಬ್ಯುಲೆನ್ಸ್​​ನಲ್ಲಿರುವ ರೋಗಿಗಳು ಪರದಾಡುವಂತಾಯಿತು.

For All Latest Updates

TAGGED:

Av

ABOUT THE AUTHOR

...view details