ಧಾರವಾಡ: ಪಾದರಾಯನಪುರ ಗಲಾಟೆಯ ಹಿಂದೆ ಜಮೀರ್ ಅಹ್ಮದ್ ಕೈವಾಡ ಇದೆ. ಗಲಭೆ ಮಾಡಿದವರನ್ನು ಅದೇ ಏರಿಯಾದಲ್ಲಿ ಬೆತ್ತಲೆ ಮೆರವಣಿಗೆ ಮಾಡಿ, ಅವರ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಬೇಕು. ಈ ಗಲಾಟೆಗೆ ಜಮೀರ್ ಅಹ್ಮದ್ ಕಾರಣೀಕರ್ತರಾಗಿದ್ದಕ್ಕೆ ಎಲ್ಲಿಯೂ ಹೊರಗೆ ಬರುತ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.
ಧಾರವಾಡದಲ್ಲಿ ಈ ಕುರಿತು ಮಾತನಾಡಿರುವ ಮುತಾಲಿಕ್, ಪಾದರಾಯನಪುರದಲ್ಲಿ ನಡೆದ ಘಟನೆ ಅಸಹ್ಯಕರವಾಗಿದ್ದು, ಇದೊಂದು ದೇಶದ್ರೋಹದ ಪ್ರಕರಣ. ಇದನ್ನು ಅಷ್ಟು ಸುಲಭವಾಗಿ ಬಿಡದೆ, ಗಂಭಿರವಾಗಿ ಸರ್ಕಾರ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.