ಹುಬ್ಬಳ್ಳಿ:ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯಕ್ಕಾಗಿ ದಿನದಿಂದ ದಿನಕ್ಕೆ ಹೊಸ ಯೋಜನೆಗಳನ್ನು ಜನ ರೂಪಿಸುತ್ತಿದ್ದಾರೆ. ಅದರಂತೆ ಆರು ಜನ ಯುವಕರ ತಂಡವೊಂದು ಕಡಿಮೆ ಹಣದಲ್ಲಿ ಹೆಚ್ಚಿನ ಆದಾಯ ಗಳಿಸಿ ಹೊಸ ಜೀವನ ಕಟ್ಟಿಕೊಂಡಿದ್ದಾರೆ.
ಲಾಕ್ಡೌನ್ ಟೈಂನಲ್ಲಿ ಮೊಲದ ಬಿಸಿನೆಸ್ ಓದಿ: ಶೀಘ್ರವೇ ಭಾರತದಲ್ಲಿ ಇನ್ನಷ್ಟು ಕೊರೊನಾ ಲಸಿಕೆಗಳು ಬರಲಿವೆ: ಜಾಗತಿಕ ರಾಷ್ಟ್ರಗಳಿಗೆ ನಮೋ ಅಭಯ
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಹೊರವಲಯದಲ್ಲಿ ಓಜ್ಯಾ ರ‍್ಯಾಬಿಟ್ ಫಾರಂಅನ್ನು ವಿರೇಶ ಚಂದರಗಿ, ಶಿವಪ್ರಸಾದ, ಮಹೇಶ, ಸುಲೆಮನ್, ಚೇತನ ಹಾಗೂ ಶ್ರೀನಿವಾಸ ಸೇರಿ ಪ್ರಾರಂಭಿಸಿದ್ದಾರೆ. ಕೇವಲ ಹತ್ತು ಮೊಲದಿಂದ ಬಿಸಿನೆಸ್ ಪ್ರಾರಂಭಿಸಿ ಸದ್ಯ 200ಕ್ಕೂ ಹೆಚ್ಚು ಮೊಲಗಳ ಸಾಕಣೆ ಮೂಲಕ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಯುಎಸ್ ವೈಟ್, ಸೋವಿತ್ ಚಿಂಚಿಲಾ, ಯ ಪ್ಲೆಮಿಶ್ ಜೈಂಟ್, ಅಲಸ್ಕಾ ಹಾಗೂ ನ್ಯೂಜಿಲೆಂಡ್ ವೈಟ್ ಸೇರಿದಂತೆ ಐದು ತಳಿಗಳಿವೆ. ಇನ್ನು ನ್ಯೂಜಿಲೆಂಡ್ ವೈಟ್ ಇವುಗಳು ಸಾಮಾನ್ಯವಾಗಿ ನಮ್ಮ ಪ್ರದೇಶ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಇವುಗಳ ಇಳುವರಿ ಕೂಡ ತುಂಬಾ ಹೆಚ್ಚಾಗಿದ್ದು, ಲಾಭದಾಯಕವಾಗಿದೆ. ಇವುಗಳನ್ನು ಕೆಲವರು ಆಹಾರ (ಮಾಂಸ)ಕ್ಕಾಗಿ ಬಳಸಿದರೆ, ಮತ್ತೆ ಕೆಲವರು ಸಾಕುಪ್ರಾಣಿಗಳಾಗಿ ಸಾಕುತ್ತಾರೆ. ಲ್ಯಾಬೋ ರೋಟರಿಗಾಗಿ ಹೆಚ್ಚು ಬೇಡಿಕೆ ಇರುವುದರಿಂದ ಹೆಚ್ಚಿನ ಆದಾಯ ಗಳಿಸಬಹುದಾಗಿದೆ.
ಕೊರೊನಾ ಲಾಕ್ಡೌನ್ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡ ಯುವಕರು ಮೊಲದ ಬಿಸಿನೆಸ್ ಮೂಲಕ ಸ್ವ ಉದ್ಯೋಗ ಸೃಷ್ಟಿ ಮಾಡಿಕೊಂಡು ಇತರರಿಗೆ ಉದ್ಯೋಗದತ್ತ ಮುಖ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಇನ್ನು ಮೊಲಗಳಿಗೆ ಗುಣಮಟ್ಟದ ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ನೀಡುವುದು, ಫೀಡ್, ಗರಿಕೆ, ಕುದುರೆ ಮೆಂತೆ ಹಾಗೂ ಕೈ ತಿಂಡಿ ಆಹಾರ ನೀಡಲಾಗುತ್ತದೆ.
ಒಂದು ಮೊಲಕ್ಕೆ 80ರಿಂದ 100 ಗ್ರಾಂ ಆಹಾರ ಹಾಗೂ 250 ಎಂಎಲ್ ನೀರು ನೀಡಲಾಗುತ್ತದೆ. ಒಳ್ಳೆಯ ಇಳುವರಿಗಾಗಿ ಫೀಡ್ ನೀಡುವುದು ಒಳಿತು. ಇದರಿಂದಾಗಿ ಮೊಲಗಳು ಹೆಚ್ಚು ಆರೋಗ್ಯದಿಂದ ಇರುತ್ತವೆ ಎನ್ನುತ್ತಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯದ ಜೊತೆಗೆ ನಿರುದ್ಯೋಗ ಹೋಗಲಾಡಿಸಲು ಹೊಸ ಪ್ರಯತ್ನ ಕಂಡುಕೊಂಡ ಯುವಕರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..