ಹುಬ್ಬಳ್ಳಿ-ಧಾರವಾಡ:ಧಾರವಾಡ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೊಬೈಲ್ ಕರೆನ್ಸಿ ಹಾಕಿಸಿಕೊಳ್ಳಲು ತಂದೆ ಹಣ ನೀಡಿಲ್ಲವೆಂದು ಕೋಪಗೊಂಡ ಮಗನೋರ್ವ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿರುವ ವಿಚಿತ್ರ ಘಟನೆ ಧಾರವಾಡ ತಾಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವಕನೋರ್ವ ಕೇವಲ 6ನೇ ತರಗತಿ ಓದಿದ್ದು, ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಿದ್ದ. ಜೊತೆಗೆ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದು, ಮಂಗಳವಾರ ಮೊಬೈಲ್ ಕರೆನ್ಸಿ ಖಾಲಿಯಾಗಿತ್ತು. ಹೀಗಾಗಿ ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಮೊಬೈಲ್‍ಗೆ ಕರೆನ್ಸಿ ಹಾಕಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳವಾಗಿದೆ. ಇದರಿಂದಾಗಿ ಕೋಪಗೊಂಡ ಯುವಕ ಗೊರವಪ್ಪನ ವೇಷ ಹಾಕಿಕೊಂಡು ಮನೆಯ ಹತ್ತಿರ ದೇವಸ್ಥಾನಕ್ಕೆ ತೆರಳಿದ್ದಾನೆ.