ಕರ್ನಾಟಕ

karnataka

ETV Bharat / state

ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮೃತದೇಹ... ಹಣದ ವ್ಯವಹಾರ ಹಿನ್ನೆಲೆ ಕೊಲೆ? - dharwad crime news

ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಹಿಂಬದಿ ಯುವಕನೋರ್ವನನ್ನು ಕೊಲೆಗೈದು ಎಸೆದಿರುವುದು ಬೆಳಕಿಗೆ ಬಂದಿದೆ.

ಯುವಕನ ಕೊಲೆ

By

Published : Jul 29, 2019, 9:53 PM IST

ಧಾರವಾಡ:ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಯುವಕನೋರ್ವನನ್ನು ಕೊಲೆಗೈದು ಎಸೆಯಲಾಗಿದೆ.‌

ಧಾರವಾಡ ಕೆಲಗೇರಿ ನಿವಾಸಿ ನಾಗರಾಜ ಹರಪನಹಳ್ಳಿ (23) ಎಂಬಾತ ಕೊಲೆಯಾದ ಯುವಕ. ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಹಿಂಬದಿ ಕೊಲೆ ಮಾಡಿ ಶವವನ್ನು ಎಸೆಯಲಾಗಿದೆ.

ಕೊಲೆಗೀಡಾದ ಯುವಕ ನಾಗರಾಜ

ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಕೊಲೆಗೈದಿರುವ ಶಂಕೆ‌ ವ್ಯಕ್ತವಾಗಿದೆ. ಯುವಕ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ABOUT THE AUTHOR

...view details