ಹುಬ್ಬಳ್ಳಿ : ಕ್ವಿಟ್ ಇಂಡಿಯಾ ಚಳವಳಿಯ ದಿನಾಚರಣೆ ಹಾಗೂ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿ-ಧಾರವಾಡದ ಸೆಂಟ್ರಲ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರಮದಾನ ಮಾಡಿ ವಿನೂತನವಾಗಿ ಪ್ರತಿಭಟಿಸಲಾಯಿತು.
ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ : ಶ್ರಮದಾನ ಮಾಡಿ ವಿನೂತನ ಪ್ರತಿಭಟನೆ - Youth Congress Founder's Day
ಕಿಮ್ಸ್ ದ್ವಾರದ ಬಾಗಿಲಿನಲ್ಲಿರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಹಾಗೂ ಆವರಣವನ್ನು ಸ್ವಚ್ಛಗೊಳಿಸಿ, ಮೋದಿ ಅವರೇ ಯುವಕರಿಗೆ ಉದ್ಯೋಗ ನೀಡಿ ಎಂದು ಆಗ್ರಹಿಸಿ ಪ್ರತಿಭಟಿಸಿದ್ರು..
ಯುವ ಕಾಂಗ್ರೆಸ್ ಸಮಿತಿ ಸದಸ್ಯರು ನಗರದ ಕಿಮ್ಸ್ ದ್ವಾರದ ಬಾಗಿಲಿನಲ್ಲಿರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಹಾಗೂ ಆವರಣವನ್ನು ಸ್ವಚ್ಛಗೊಳಿಸಿ, ಮೋದಿ ಅವರೇ ಯುವಕರಿಗೆ ಉದ್ಯೋಗ ನೀಡಿ ಎಂದು ಆಗ್ರಹಿಸಿ ಪ್ರತಿಭಟಿಸಿದ್ರು.
ರಾಷ್ಟ್ರದಲ್ಲಿ 30 ಕೋಟಿಗೂ ಹೆಚ್ಚು ನಿರುದ್ಯೋಗಿಗಳಿದ್ದಾರೆ. ಮೋದಿ ಸರ್ಕಾರ ಯುವಕರ ಧ್ವನಿಯನ್ನು ಕಡೆಗಣಿಸಿದೆ. ಸಾವಿರಾರು ಯುವಕರು ನಿರುದ್ಯೋಗದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡ್ತೀವಿ ಅಂತಾ ಸುಳ್ಳು ಭರವಸೆ ಕೊಟ್ಟು ಮೋದಿ ಸರ್ಕಾರ ಅಧಿಕಾರಕ್ಕೇರಿದೆ. ಆದರೆ, ಕೋವಿಡ್-19 ಕೆಟ್ಟ ನಿರ್ವಹಣೆಯಿಂದ 12 ಕೋಟಿ ಉದ್ಯೋಗ ಇರುವಂತಹ ಯುವಕರು ನಿರುದ್ಯೋಗಿಗಳಾಗಿದ್ದಾರೆಂದು ಕಟುವಾಗಿ ಟೀಕಿಸಿದರು.