ಹುಬ್ಬಳ್ಳಿ: ಅತಿಯಾದ ನಾಯಿ ಪ್ರೀತಿ ಯುವಕನೊಬ್ಬನ್ನು ಬಲಿ ಪಡೆದಿರುವ ಘಟನೆ ನಗರದ ಮಿಷನ್ ಕಾಪೌಂಡ್‌ನಲ್ಲಿ ಶುಕ್ರವಾರ ನಡೆದಿದೆ. ಅಲೆನ್ ಭಸ್ಮೆ (23) ಆತ್ಮಹತ್ಯೆ ಮಾಡಿಕೊಂಡ ಯುವಕ.
ಎರಡು ಲಕ್ಷ ರೂಪಾಯಿ ನಾಯಿ ಮರಿಗಾಗಿ ಹಠ!: ಯುವಕ ಆತ್ಮಹತ್ಯೆ - ವಿವಿಧ ತಳಿಯ ಶ್ವಾನ
Youth committed suicide: ನಾಯಿ ಮರಿ ಕೊಡಿಸುವಂತೆ ಹಠ ಹಿಡಿದಿದ್ದ ಮಗನ ವರ್ತನೆಗೆ ತಾಯಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಮಗ ಅಲೆನ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Published : Dec 1, 2023, 5:04 PM IST
ಅಲೆನ್ಗೆ ಶ್ವಾನಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಮನೆಯಲ್ಲಿ ವಿವಿಧ ತಳಿಯ ಶ್ವಾನಗಳನ್ನು ಸಾಕಿದ್ದ. ಇತ್ತೀಚೆಗೆ ಎರಡು ಲಕ್ಷ ರೂ. ಮೌಲ್ಯದ ನಾಯಿ ಮರಿ ಕೊಡಿಸುವಂತೆ ಅಲೆನ್, ತಾಯಿಯ ಬಳಿ ಹಠ ಮಾಡಿದ್ದ. ಮಗನ ಕಾಟಕ್ಕೆ ತಾಯಿ ಮನೆ ಬಿಟ್ಟು ಹೋಗಿದ್ದರು. ತಾಯಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದ ಯುವಕ ಅಲೆನ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಈ ಕುರಿತು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೋಟಾ: ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುಪಿ ವಿದ್ಯಾರ್ಥಿನಿ ಆತ್ಮಹತ್ಯೆ