ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ - Suburban Police Station Hubli

ಚಾಕುವಿನಿಂದ ಇರಿದು ಯುವಕನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

youth Brutally murdered
ಹಳೆ ದ್ವೇಷದ ಹಿನ್ನೆಲೆ; ಯುವಕನನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ

By

Published : Nov 20, 2022, 12:26 PM IST

ಹುಬ್ಬಳ್ಳಿ: ಹಳೇ ದ್ವೇಷ ಹಾಗು ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. ಸದರಸೋಪಾ ನಿವಾಸಿ ಜಾಫರ್ ಇಮ್ಮಿಯಾಜ್ ದಡೆಸುರ ಕೊಲೆಯಾದ ಯುವಕ. ನಗರದ ಖಸಾಯಿ ಮೋಹಲ್ಲಾದಲ್ಲಿ ಕೃತ್ಯ ನಡೆದಿದೆ.

ಚಾಕು ಇರಿತದಿಂದ ಗಂಭೀರ ಗಾಯಗೊಂಡು ಬಿದ್ದಿದ್ದ ಜಾಫರ್‌ನನ್ನು ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಕ್ಕಳಾಗಲಿಲ್ಲವೆಂದು ಮಹಿಳೆಗೆ ರುಬ್ಬುವ ಗುಂಡಿನಿಂದ ಜಜ್ಜಿ ಕೊಲೆ.. ವಿಜಯನಗರದಲ್ಲಿ ರಾಕ್ಷಸಿ ಕೃತ್ಯ

ಮತ್ತೊಂದು ಪ್ರಕರಣ:ಬೈಕ್ ಸ್ಕಿಡ್ ಆಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಾರನನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಹುಬ್ಬಳ್ಳಿಯ ಉಪನಗರ ಪೋಲಿಸ್ ಠಾಣೆ ಇನ್ಸ್​ಪೆಕ್ಟರ್ ರವಿಚಂದ್ರ ಬಡಫಕೀರಪ್ಪ ಮಾನವೀಯತೆ ಮೆರೆದರು

ದೇಶಪಾಂಡೆ ನಗರದ ಗುಜರಾತ್ ಭವನ ಬಳಿ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಅದೇ ದಾರಿಯಲ್ಲಿ ಹೋಗುತ್ತಿದ್ದ ಇನ್ಸ್‌ಪೆಕ್ಟರ್‌ ರವಿಚಂದ್ರ ವ್ಯಕ್ತಿಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆ ಸೇರಿಸಿದ್ದಾರೆ.

ABOUT THE AUTHOR

...view details