ಧಾರವಾಡ: ಯುವಕನ ಮೇಲೆ ಪುಂಡರ ಗುಂಪೊಂದು ಹಲ್ಲೆ ಮಾಡಿದ ಪ್ರಕರಣ ಲಕ್ಷ್ಮಿಸಿಂಗನಕೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶಿವು ಲಮಾಣಿ ಎಂಬ ಯುವಕನ ಮೇಲೆ ನಾಲ್ಕೈದು ಜನರ ತಂಡವೊಂದು ಏಕಾಏಕಿ ರಾಡ್ ಹಾಗೂ ಬಡಿಗೆಗಳಿಂದ ಹಲ್ಲೆ ಮಾಡಿದೆ. ಇದರಿಂದ ಯುವಕನ ತಲೆ, ಕೈ ಹಾಗೂ ಕಾಲಿನ ಭಾಗಗಳಿಗೆ ಪೆಟ್ಟಾಗಿದೆ. ಚಿಕಿತ್ಸೆಗಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.