ಹುಬ್ಬಳ್ಳಿ:ಮದುವೆಯಾಗಲು ಯುವತಿ ಮನೆಯವರು ಒಪ್ಪಲಿಲ್ಲವೆಂಬ ಕಾರಣಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿಯ ಖಸಾಯಿ ಓಣಿಯಲ್ಲಿ ನಡೆದಿದೆ.
'ಮೈ ಅಬ್ ಮರ್ತಾ ಹು': ಸ್ನೇಹಿತನಿಗೆ ವಾಟ್ಸ್ಪ್ ಸಂದೇಶ ಕಳಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ - Young women's family refusal to marry
ಕೆಲವು ದಿನಗಳಿಂದ ಯುವತಿವೋರ್ವಳನ್ನು ಪ್ರೀತಿಸುತ್ತಿದ್ದ ಯುವಕ ಈಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯುವತಿ ಮನೆಯವರು ಇವರ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ 'ಮೈ ಅಬ್ ಮರ್ತಾ ಹು' ಎಂದು ಸ್ನೇಹಿತನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಈ ದುಡುಕು ನಿರ್ಧಾರ ಕೈಗೊಂಡಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ.
30ವರ್ಷದ ಶಾಯಿಕ್(ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಕೆಲವು ದಿನಗಳಿಂದ ಯುವತಿವೊರ್ವಳನ್ನು ಪ್ರೀತಿಸುತ್ತಿದ್ದ. ತನ್ನ ಪ್ರೇಯಸಿಯ ಮನೆಯವರ ಎದುರು ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಆಕೆ ಕುಟುಂಬಸ್ಥರು ಈತನ ಪ್ರಸ್ತಾಪ ತಳ್ಳಿ ಹಾಕಿದ್ದರಿಂದ ಮನನೊಂದ ಶಾಯಿಕ್ 'ಮೈ ಅಬ್ ಮರ್ತಾ ಹು' ಎಂದು ತನ್ನ ಸ್ನೇಹಿತನಿಗೆ ವಾಟ್ಸ್ಪ್ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಯುವಕನ ಮನೆಗೆ ಧಾವಿಸಿದ ಸ್ನೇಹಿತರು ನೇಣಿನ ಕುಣಿಕೆಯಲ್ಲಿ ಬಿದ್ದಿದ್ದ ಈತನನ್ನು ರಕ್ಷಿಸಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕಸಬಾ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.