ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ರೈಲ್ವೆ ಹಳಿ ಮೇಲೆ ಯುವಕನ ಮೃತದೇಹ ಪತ್ತೆ.. ಸಾವಿನ ಸುತ್ತ ಅನುಮಾನದ ಹುತ್ತ! - veeresha chikkatumbala death

ಗೆಳೆಯರ ಜೊತೆ ಗೋವಾಕ್ಕೆ ಹೊರಟ ಯುವಕ ರೈಲ್ವೆ ಟ್ರ್ಯಾಕ್ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ಜೊತೆಗಿದ್ದ ಸ್ನೇಹಿತರು ನಾಪತ್ತೆಯಾಗಿದ್ದಾರೆ.

Young man's dead body found on Hubli railway track
ಹುಬ್ಬಳ್ಳಿ ರೈಲ್ವೆ ಹಳಿ ಮೇಲೆ ಯುವಕನ ಮೃತದೇಹ ಪತ್ತೆ

By

Published : Jun 7, 2022, 3:17 PM IST

ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿ ರೈಲ್ವೆ ಹಳಿ ಮೇಲೆ ಯುವಕನ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಉದ್ಭವಿಸಿವೆ. ವಿರೇಶ ಚಿಕ್ಕತುಂಬಳ ಮೃತ ಯುವಕನಾಗಿದ್ದಾನೆ.

ದುರ್ಗಪ್ಪಾ ಚಿಕ್ಕದುಂಬಳ, ಮೃತನ ಚಿಕ್ಕಪ್ಪ

ನಗರದ ಗಿರಣಿಚಾಳದ ನಿವಾಸಿ ವಿರೇಶ ಚಿಕ್ಕತುಂಬಳ ಸೋಮವಾರ ಮನೆಯಲ್ಲಿ ಗೆಳೆಯರ ಜೊತೆ ಗೋವಾಗೆ ಹೋಗಬೇಕು ಎಂದು ಹೇಳಿ ಹೊರಟಿದ್ದ. ರಾತ್ರಿ ಗೆಳೆಯರ ಜೊತೆ ಗೋವಾ ಟ್ರೈನ್ ಕೂಡಾ ಏರಿದ್ದಾನೆ ಎನ್ನಲಾಗಿದೆ. ಆದರೆ, ಹುಬ್ಬಳ್ಳಿಯ ಉಣಕಲ್ ಅಮರಗೋಳದ ನಡುವೆ ರೈಲ್ವೆ ಹಳಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಹುಬ್ಬಳ್ಳಿ ರೈಲ್ವೆ ಹಳಿ ಮೇಲೆ ಯುವಕನ ಮೃತದೇಹ ಪತ್ತೆ

ಈ ಸಾವು ಅಸಹಜ ಸಾವು. ಜೊತೆಗಿದ್ದ ಉದಯ, ಕಿರಣ್ ಅವರೇ ವಿರೇಶ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಹೋದ ನಾಲ್ಕು ಜನರಲ್ಲಿ ಒಬ್ಬ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಗಾಯಗೊಂಡ ಯುವಕ ಕಿಮ್ಸ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತ ವಿರೇಶನ ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಪ್ರತಾಪ್​​ ಸಿಂಹ ವಿರುದ್ಧ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ

ABOUT THE AUTHOR

...view details