ಹುಬ್ಬಳ್ಳಿ:ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಮನವಿ ಸಲ್ಲಿಸಲು ಹೋದ ಯುವಕನಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ನಿನ್ನೆ ಪಡೆದ ಪ್ರಶಸ್ತಿಯನ್ನು ಯುವಕ ಇಂದು ತಾಲೂಕು ಆಡಳಿತಕ್ಕೆ ಮರಳಿಸಿದ್ದಾನೆ.
ನಿನ್ನೆ ನಗರಗ ಗೋಕುಲ್ ರಸ್ತೆಯ ಖಾಸಗಿ ಹೊಟೇಲ್ನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2020-21ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮನವಿ ಸಲ್ಲಿಸಲು ಹೋದ ಕುಂದಗೋಳ ತಾಲೂಕಿನ ಬಸವರಾಜ್ ಯೋಗಪ್ಪನವರ್ ಎಂಬ ಯುವಕನಿಗೆ ಸಾಧಕ ಪ್ರಶಸ್ತಿ ನೀಡುವ ಮೂಲಕ
ಗ್ರಾಮೀಣಾಭಿವೃದ್ಧಿ ಇಲಾಖೆ ಎಡವಟ್ಟು ಮಾಡಿತ್ತು. ಈ ಬಗ್ಗೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಅಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಯುವಕ ತಾನು ಪಡೆದ ಪ್ರಶಸ್ತಿಯನ್ನು ತಾಲೂಕು ಆಡಳಿತಕ್ಕೆ ಮರಳಿಸಿದ್ದಾನೆ.