ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಬಳಿ ಭೀಕರ ರಸ್ತೆ ಅಪಘಾತ: ಟಿಪ್ಪರ್​ ಹರಿದು ಯುವಕನ ದೇಹ ಛಿದ್ರ - hubballi tipper accident

ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿ ಯುವಕನ ದೇಹ ಛಿದ್ರವಾದ ಘಟನೆ ಹುಬ್ಬಳ್ಳಿ ಬಳಿ ಸಂಭವಿಸಿದೆ.

young-man-died-on-spot-in-tipper-accident-at-hubballi
young-man-died-on-spot-in-tipper-accident-at-hubballi

By

Published : Dec 9, 2022, 5:16 PM IST

ಹುಬ್ಬಳ್ಳಿ:ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರಿಗೆ​​ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿ ದೇಹ ಛಿದ್ರವಾದ ಭೀಕರ ಘಟನೆ ಗುರುವಾರ ತಡರಾತ್ರಿ ಇಲ್ಲಿನ ಕುಸಗಲ್ ರಸ್ತೆಯಲ್ಲಿ ಸಂಭವಿಸಿದೆ. ಹುಬ್ಬಳ್ಳಿ ತಾಲೂಕಿನ ಚನ್ನಾಪುರದ ನಿವಾಸಿ ರಹಿಮಾನಸಾಬ್ ಕೆರಿಮನಿ ಎಂಬಾತ ಸ್ಥಳದಲ್ಲೇ ಅಸುನೀಗಿದ್ದಾನೆ. ಹಳೇ ಹುಬ್ಬಳ್ಳಿ ನಿವಾಸಿ ಸೈಯ್ಯದಸಾಬ ಗದಗಕರ ಎಂಬಾತನಿಗೆ ಗಾಯಗಳಾಗಿದೆ. ಇಬ್ಬರೂ ಯುವಕರು ವಾಹನವೊಂದನ್ನು ಟೊಯಿಂಗ್​ ಮಾಡಿಕೊಂಡು ಬರುವಾಗ ಅವಘಡ ಸಂಭವಿಸಿದೆ.

ಕುಸಗಲ್ ರಸ್ತೆಯಲ್ಲಿರುವ ಸಿದ್ದಾರೂಢ ಮಠದ ಹತ್ತಿರ ವಾಹನ ನಿಲ್ಲಿಸಿ ಹಗ್ಗ ಬಿಗಿಯಾಗಿ ಕಟ್ಟುತ್ತಿರುವಾಗ, ಅದೇ ಮಾರ್ಗವಾಗಿ ಎಂಸ್ಯಾಂಡ್ ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ್​ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆ ನಡೆಯುತ್ತಿದಂತೆ ಚಾಲಕ ಸ್ಥಳದಲ್ಲೇ ಟಿಪ್ಪರ್​​ ಬಿಟ್ಟು ಪರಾರಿಯಾಗಿದ್ದಾನೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ಗರ್ಭಿಣಿಯಾದ 12 ವರ್ಷದ ಬಾಲಕಿ, ಮಹಿಳಾ ಠಾಣೆಗೆ ದೂರು

ABOUT THE AUTHOR

...view details