ಕರ್ನಾಟಕ

karnataka

ETV Bharat / state

ಮೀನು ಹಿಡಿಯಲು ಹೋದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ - ಕೆರೆಗೆ ಬಿದ್ದು ಯುವಕ ಸಾವು

ಮಾರಡಗಿ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯುವುದಕ್ಕೆ ಆಗಾಗ್ಗೆ ‌ಭೇಟಿ ನೀಡುತ್ತಿದ್ದ ಬಸವರಾಜ ಹಡಪದ ಮೀನು ಹಿಡಿಯಲು ಹೋದ ಸಂದರ್ಭ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಎಂಬ ಅನುಮಾನ ಹುಟ್ಟಿದೆ.

Dharwad
ಶವ

By

Published : Dec 27, 2020, 7:33 PM IST

ಧಾರವಾಡ: ಮೀನು ಹಿಡಿಯಲೆಂದು ಹೋದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮಾರಡಗಿ ಗ್ರಾಮದಲ್ಲಿ ನಡದಿದೆ.

ಮೃತ ಯುವಕನನ್ನು ಬಸವರಾಜ ಹಡಪದ ಎಂದು ಗುರುತ್ತಿಸಲಾಗಿದೆ. ಈತ ತಾಲೂಕಿನ‌ ಹೆಬ್ಬಳ್ಳಿ ಗ್ರಾಮದ ನಿವಾಸಿಯಾಗಿದ್ದು, ಕಳೆದ ಮೂರು ದಿನಗಳಿಂದ ಈತ ಗ್ರಾಮದಿಂದ ನಾಪತ್ತೆಯಾಗಿದ್ದ. ಕುಟುಂಬಸ್ಥರು ಮೂರು ದಿನಗಳಿಂದ ಸತತವಾಗಿ ಬಸವರಾಜನಿಗಾಗಿ ಹುಡುಕಾಟ ನಡೆಸಿದ್ದಾರೆ.

ಈತ ಮಾರಡಗಿ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯುವುದಕ್ಕೆ ಆಗಾಗ್ಗೆ ‌ಭೇಟಿ ನೀಡುತ್ತಿದ್ದ ಎನ್ನಲಾಗಿದೆ. ಹಿಡಿದ ಮೀನುಗಳನ್ನು ತೆಗೆದುಕೊಂಡು ಗ್ರಾಮಕ್ಕೆ ಹೋಗಿ ಮಾರಾಟ ಮಾಡುತ್ತಿದ್ದನು. ಮೀನು ಹಿಡಿಯಲು ಹೋದ ಸಂದರ್ಭ ಕೆರೆಗೆ ಬಿದ್ದು ಬಸವರಾಜ ಮೃತಪಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಓದಿ:ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು..!

ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ABOUT THE AUTHOR

...view details