ಧಾರವಾಡ:ಜಿ.ಪಂ. ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮತ್ತೆ ಪುನರ್ ಆರಂಭಗೊಂಡಿದ್ದು, ಜಿಲ್ಲೆಗೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದಾರೆ.
ಯೋಗೀಶಗೌಡ ಹತ್ಯೆ ಪ್ರಕರಣ: ಮತ್ತೆ ಸಿಬಿಐ ತನಿಖೆ ಶುರು! - Yogishagowda murder case
ಜಿ.ಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮತ್ತೆ ಪುನರ್ ಆರಂಭಗೊಂಡಿದೆ.

ಯೋಗೀಶಗೌಡ ಹತ್ಯೆ ಪ್ರಕರಣ: ಮತ್ತೆ ಸಿಬಿಐ ತನಿಖೆ ಆರಂಭ!
ಯೋಗೀಶಗೌಡ ಹತ್ಯೆ ಪ್ರಕರಣ: ಮತ್ತೆ ಸಿಬಿಐ ತನಿಖೆ ಆರಂಭ!
ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಮೂವರು ಆರೋಪಿಗಳನ್ನು ಕರೆಯಿಸಿ ವಿಚಾರಣೆ ಮಾಡಲಾಗುತ್ತಿದೆ. ಕೋರ್ಟ್ ತಡೆಯಾಜ್ಞೆ ತೆರವುಗೊಂಡ ಬೆನ್ನಲ್ಲೆ ಸಿಬಿಐ ತನಿಖೆ ಚುರುಕುಗೊಂಡಿದೆ.
ರಾಜ್ಯ ಸರ್ಕಾರದಿಂದ ಸಿಬಿಐ ತನಿಖೆಗೆ ಸೂಚಿಸಿತ್ತು. ಆದರೆ, ಸಿಬಿಐ ತನಿಖೆಗೆ ಹೈಕೋರ್ಟ್ನಿಂದ ಪ್ರಕರಣದ ಪ್ರಥಮ ಆರೋಪಿ ತಡೆಯಾಜ್ಞೆ ತಂದಿದ್ದು, ಸಿಬಿಐ ತನಿಖೆ ನಡೆದಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಫೆ. 20 ರಂದು ಹೈಕೋರ್ಟ್ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ್ದು, ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆ ತನಿಖೆಯನ್ನು ಸಿಬಿಐ ಅಧಿಕಾರಿಗಳು ಪುನರ್ ಆರಂಭಿಸಿದ್ದಾರೆ.