ಕರ್ನಾಟಕ

karnataka

ETV Bharat / state

ಯೋಗೇಶ ಗೌಡ ಹತ್ಯೆ ಪ್ರಕರಣ: ಸಾಕ್ಷ್ಯನಾಶ ಕೇಸ್ ಬೆಂಗಳೂರಿಗೆ ಶಿಫ್ಟ್

ಯೋಗೇಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ‌ ವಿನಯ ಕುಲಕರ್ಣಿ ಮೇಲಿನ ಸಾಕ್ಷ್ಯನಾಶ ಕೇಸ್​ ಧಾರವಾಡದ ಪ್ರಧಾನ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿತ್ತು. ಈ ಕೇಸನ್ನು ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಶಿಫ್ಟ್ ಮಾಡಿ ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಯೋಗೀಶಗೌಡ ಹತ್ಯೆ ಪ್ರಕರಣ
ಯೋಗೀಶಗೌಡ ಹತ್ಯೆ ಪ್ರಕರಣ

By

Published : Feb 15, 2021, 8:28 PM IST

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ‌ ವಿನಯ ಕುಲಕರ್ಣಿ ಮೇಲಿನ ಸಾಕ್ಷ್ಯನಾಶ ಕೇಸ್ ಸಹ ಬೆಂಗಳೂರಿಗೆ ಶಿಫ್ಟ್ ಆಗಿದೆ.

ಧಾರವಾಡದ ಪ್ರಧಾನ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿದ್ದ ಕೇಸನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಶಿಫ್ಟ್ ಮಾಡಿ, ಧಾರವಾಡ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಓದಿ:ಕಿರಿಕಿರಿ ಮಾಡುತ್ತಿದ್ದ ಮಗನನ್ನೇ ಕೊಂದ ಚಿಕ್ಕಪ್ಪ.. ಬೆಚ್ಚಿದ ವಿದ್ಯಾಕಾಶಿ!

ಇದರಿಂದ ವಿನಯ ಪರ ವಕೀಲರ ಮನವಿಗೆ ಮಾನ್ಯತೆ ಲಭಿಸಿದಂತಾಗಿದೆ. ಕಳೆದ ವಾರ ಸಿಬಿಐ ನ್ಯಾಯಾಲಯದ ಕೇಸ್ ಕೂಡ ಶಿಫ್ಟ್ ಆಗಿತ್ತು. ಇದೀಗ ಸಾಕ್ಷ್ಯನಾಶ ಕೇಸ್ ಸೇರಿದಂತೆ ಎರಡೂ ಕೇಸ್ ಜನಪ್ರತಿನಿಧಿಗಳ ಕೋರ್ಟ್‌ಗೆ ವರ್ಗಗೊಂಡಿವೆ.

ನವೆಂಬರ್ 5 ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ಸದ್ಯ ವಿನಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ.

ABOUT THE AUTHOR

...view details