ಧಾರವಾಡ:ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಹಿನ್ನೆಲೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವಿನಯ ಕುಲಕರ್ಣಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಯೋಗೀಶಗೌಡ ಕೊಲೆ ಪ್ರಕರಣ.. ಮಾಜಿ ಸಚಿವರಿಗೆ ಕೋರ್ಟ್ ನೋಟಿಸ್.. - ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಸದಸ್ಯ ಯೋಗೀಶ ಗೌಡ
ಕೊಲೆ ಪ್ರಕರಣದ ಕಾರ್ ಬಳಕೆ ಕುರಿತ ವಿಚಾರಣೆಗಾಗಿ ಚಾಲಕ ಮಂಜುನಾಥ ಬಸಣ್ಣವರ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿಗೆ ನೋಟಿಸ್ ಜಾರಿ ಮಾಡಲಾಗಿದೆ.
ವಿನಯ ಕುಲಕರ್ಣಿ
ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. 2016 ಜೂನ್ 15ರಂದು ಜಿಲ್ಲಾ ಪಂಚಾಯತ್‌ನ ಹೆಬ್ಬಳ್ಳಿ ಕ್ಷೇತ್ರದ ಸದಸ್ಯ ಯೋಗೀಶ ಗೌಡ ಗೌಡರ ಕೊಲೆಯಾಗಿತ್ತು.
ಕೊಲೆ ಪ್ರಕರಣದ ಕಾರ್ ಬಳಕೆ ಕುರಿತ ವಿಚಾರಣೆಗಾಗಿ ಚಾಲಕ ಮಂಜುನಾಥ ಬಸಣ್ಣವರ ಮತ್ತು ವಿನಯ ಕುಲಕರ್ಣಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇಬ್ಬರನ್ನೂ ಹೆಚ್ಚುವರಿ ಆರೋಪಿಗಳನ್ನಾಗಿಸುವಂತೆ ಯೋಗೀಶಗೌಡ ಗೌಡರ ಸಹೋದರ ಗುರುನಾಥಗೌಡ ಗೌಡರ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
Last Updated : Jul 27, 2019, 3:13 PM IST