ಧಾರವಾಡ:ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ಚುರುಕುಗೊಂಡಿದ್ದು, ಓರ್ವನನ್ನು ವಶಕ್ಕೆ ಪಡೆದುಕೊಂಡಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣ: ಕಾರು ಚಾಲಕನ ವಶಕ್ಕೆ ಪಡೆದ ಸಿಬಿಐ - ಸಿಬಿಐನಿಂದ ಯೋಗೇಶ್ಗೌಡ ಕೊಲೆ ಪ್ರಕರಣ ತನಿಖೆ
ಧಾರವಾಡದಲ್ಲಿ ನಡೆದಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ತಂಡವು ಓರ್ವನನ್ನು ವಶಕ್ಕೆ ಪಡೆದುಕೊಂಡಿದೆ.
ಯೋಗೇಶ್ಗೌಡ ಕೊಲೆ ಪ್ರಕರಣ
ಕೊಲೆ ಕೃತ್ಯಕ್ಕೆ ಬಳಕೆ ಮಾಡಲಾಗಿತ್ತು ಎನ್ನಲಾದ ಕಾರಿನ ಚಾಲಕ ಸಂತೋಷ ಸವದತ್ತಿ ಎಂಬಾತನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸಂತೋಷ ಸವದತ್ತಿಯು ಕೊಲೆ ಆರೋಪಿ ಸಂದೀಪ ಸವದತ್ತಿ ಸಹೋದರನಾಗಿದ್ದಾನೆ. ಕೊಲೆ ಪ್ರಕರಣದಲ್ಲಿ ಸಂದೀಪ ಸವದತ್ತಿ ನಾಲ್ಕನೇ ಆರೋಪಿಯಾಗಿದ್ದಾನೆ.
2016ರ ಜೂನ್ 15ರಂದು ಧಾರವಾಡ ನಗರದ ಉದಯ ಜಿಮ್ನಲ್ಲಿ ಯೋಗೇಶ್ ಗೌಡನ ಕೊಲೆ ನಡೆದಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ತಂಡ ಹಲವರ ವಿಚಾರಣೆ ನಡೆಸಿ, ಸಂತೋಷ ಸವದತ್ತಿಯನ್ನು ವಶಕ್ಕೆ ಪಡೆದಿದೆ.