ಧಾರವಾಡ: ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ 7ನೇ ಆರೋಪಿ ಸಂತೋಷ ಸವದತ್ತಿಗೆ ಜಾಮೀನು ಮಂಜೂರಾಗಿದೆ.
ಯೋಗೀಶಗೌಡ ಕೊಲೆ ಪ್ರಕರಣ: ಏಳನೇ ಆರೋಪಿಗೆ ಜಾಮೀನು - ಜಿಪಂ ಸದಸ್ಯ ಯೋಗೀಶಗೌಡ ಕೊಲೆ
ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 7ನೇ ಆರೋಪಿ ಸಂತೋಷ ಸವದತ್ತಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಆರೋಪಿಗೆ ಜಾಮೀನು
ಕಳೆದ ನವೆಂಬರ್ 20ರಂದು ಆರೋಪಿ ಸಂತೋಷನನ್ನು ಸಿಬಿಐ ಬಂಧಿಸಿ, ಧಾರವಾಡದ 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಂತರ ತಲಾ 1 ಲಕ್ಷ ರೂಪಾಯಿ, ಎರಡು ಶ್ಯೂರಿಟಿ ಪಡೆದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶಿಸಿದೆ. ಜೊತೆಗೆ ಜಿಲ್ಲೆ ಬಿಟ್ಟು ಹೊರ ಹೋಗದಂತೆ ಹಾಗೂ ವಿಚಾರಣೆ ದಿನಾಂಕ ತಪ್ಪಿಸದಂತೆ ನ್ಯಾಯಾಲಯ ಷರತ್ತು ವಿಧಿಸಿದೆ.