ಧಾರವಾಡ:ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪರ ಬ್ಯಾಟಿಂಗ್ ಮಾಡುತ್ತಿರುವ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿಗೆ ಮೃತ ಯೋಗೇಶ್ ಗೌಡ ತಾಯಿ ಬಹಿರಂಗ ಪತ್ರ ಬರೆದಿದ್ದಾರೆ.
ಮೃತ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಈಗ ಎರಡು ದಿನಗಳಲ್ಲಿ ಸ್ವಾಮೀಜಿ ಆಸಕ್ತಿ ತೋರುತ್ತಿರುವುದು ನನಗೆ ದುಃಖವಾಗಿದೆ. ನಾನು, ನನ್ನ ಪತಿ ಮತ್ತು ನಮ್ಮ ಪೂರ್ವಜರು ಹಿಂದೂ ಲಿಂಗಾಯತ ಪಂಚಮಸಾಲಿ ಧರ್ಮವನ್ನು ಪಾಲಿಸುತ್ತಿದ್ದೇವೆ ಎಂದು ತಾಯಿ ತುಂಗವ್ವ ಗೌಡರ್ ಸೇರಿದಂತೆ ಅವರ ಕುಟುಂಬ ಸದಸ್ಯರು ಜಯ ಮೃತ್ಯುಂಜಯ ಸ್ವಾಮೀಜಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಈ ಹಿನ್ನೆಲೆ ಸ್ವಾಮೀಜಿಗೆ ಮೃತ ಯೋಗೇಶ್ ಗೌಡ ತಾಯಿ ತುಂಗವ್ವ ಗೌಡರ್ ಪತ್ರ ಬರೆದಿದ್ದಾರೆ.