ಕರ್ನಾಟಕ

karnataka

ETV Bharat / state

ಯೋಗೇಶ್​ ಗೌಡ ಹತ್ಯೆ ಪ್ರಕರಣ ಸಂಬಂಧ ಪತ್ನಿ ಮಲ್ಲಮ್ಮ ಸಿಬಿಐ ವಿಚಾರಣೆ - ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆ ಕುರಿತು ಸಿಬಿಐ ವಿಚಾರಣೆ

ಹುಬ್ಬಳ್ಳಿಯ ಸಿ‌ಎಆರ್ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೇಶ್​ ಗೌಡ ಪತ್ನಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಯೋಗೇಶ್​ ಗೌಡ ಪತ್ನಿ ಮಲ್ಲಮ್ಮ ಸಿಬಿಐ ವಿಚಾರಣೆ
ಪತ್ನಿ ಮಲ್ಲಮ್ಮ ಸಿಬಿಐ ವಿಚಾರಣೆ

By

Published : Nov 8, 2020, 5:52 PM IST

Updated : Nov 8, 2020, 6:12 PM IST

ಹುಬ್ಬಳ್ಳಿ:ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯೋಗೇಶ್ ಗೌಡ ಪತ್ನಿ ಸಿಬಿಐ ವಿಚಾರಣೆಗೆ ಆಗಮಿಸಿದ್ದಾರೆ.

ಯೋಗೇಶ್​ ಗೌಡ ಪತ್ನಿ ಮಲ್ಲಮ್ಮ ಸಿಬಿಐ ವಿಚಾರಣೆ

ನಿನ್ನೆಯಿಂದ ನಗರದ ಸಿ‌ಎಆರ್ ಮೈದಾನದಲ್ಲಿ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆ ನಡೆಸಿದ್ದಾರೆ. ಇಂದು ಯೋಗೇಶ್ ಗೌಡ ಪತ್ನಿಯನ್ನು ವಿಚಾರಣೆಗೆ ಕರೆದಿದ್ದು ಸಾಕಷ್ಟು ಕುತೂಹಲ‌ ಮೂಡಿಸಿದೆ.

ಪತಿ ಕೊಲೆಯಾದ ಮೇಲೆ ಮಲ್ಲಮ್ಮ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಹೀಗೆ ಕಾಂಗ್ರಸ್​ ಪಕ್ಷ ಸೇರಲು ಮಲ್ಲಮ್ಮ 2 ಕೋಟಿ ರೂ. ಹಣ ಪಡೆದಿದ್ದರು ಎಂದು ಹೇಳಲಾಗುತ್ತಿದ್ದು, ಈ ಕುರಿತು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿಯ ಸೋದರಮಾವ ಚಂದ್ರ ಶೇಖರ ಇಂಡಿ ಸಹ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಸತತ ಎರಡು ದಿನ ವಿಚಾರಣೆಗೆ ಚಂದ್ರಶೇಖರ ಇಂಡಿ ಆಗಮಿಸಿದ್ದಾರೆ.

Last Updated : Nov 8, 2020, 6:12 PM IST

For All Latest Updates

TAGGED:

ABOUT THE AUTHOR

...view details