ETV Bharat Karnataka

ಕರ್ನಾಟಕ

karnataka

ETV Bharat / state

ಧಾರವಾಡ ನ್ಯಾಯಾಲಯಕ್ಕೆ ವಿನಯ ಕುಲಕರ್ಣಿ.. ಕೋರ್ಟ್‌ ಮತ್ತೆ ಸಿಬಿಐ ಕಸ್ಟಡಿಗೆ ನೀಡುತ್ತಾ? - ಯೋಗೀಶ್​ ಗೌಡ ಕೊಲೆ ಪ್ರಕರಣದ ವಿಚಾರಣೆ ಲೇಟೆಸ್ಟ್​ ಸುದ್ದಿ

ಈಗಾಗಲೇ ಎಲ್ಲ ರೀತಿಯ ಸಿದ್ದತೆಯನ್ನು ಸಿಬಿಐ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದು, ಧಾರವಾಡದ ಉಪನಗರ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನಿಯೋಜನೆ ಮಾಡಲಾಗಿದೆ..

vinay kulkarni to produce court
ಧಾರವಾಡ ನ್ಯಾಯಾಲಯಕ್ಕೆ ವಿನಯ ಕುಲಕರ್ಣಿ
author img

By

Published : Nov 9, 2020, 11:32 AM IST

ಹುಬ್ಬಳ್ಳಿ : ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ್​ ಗೌಡ ಗೌಡರ ಕೊಲೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಸಿಬಿಐ ಕಸ್ಟಡಿ ಇಂದು ಅಂತ್ಯಗೊಳ್ಳಲಿದೆ.

ಈ ಹಿನ್ನೆಲೆ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಧಾರವಾಡ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಹುಬ್ಬಳ್ಳಿಯ ಸಿಎಆರ್ ಮೈದಾನಕ್ಕೆ ಕರೆತಂದು ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು, ವಿನಯ್ ಜೊತೆ ಪತ್ನಿ ಮಲ್ಲಮ್ಮ ಸೇರಿದಂತೆ ಹಲವರನ್ನ ವಿಚಾರಣೆ ನಡೆಸಿದ್ದಾರೆ.

ಅಲ್ಲದೇ ಇನ್ನಷ್ಟು ವಿಚಾರಣೆ ನಡೆಸುವ ಅಗತ್ಯ ಇದೆ. ಅದಕ್ಕಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಅಧಿಕಾರಿಗಳು ನ್ಯಾಯಾಲಯದಲ್ಲಿ ಮನವಿ ಮಾಡುವ ಸಾಧ್ಯತೆಯಿದೆ.

ಧಾರವಾಡ ನ್ಯಾಯಾಲಯಕ್ಕೆ ವಿನಯ ಕುಲಕರ್ಣಿ
ವಿನಯ್ ಕುಲಕರ್ಣಿ ಪರ ರಾಜ್ಯ ಹಾಗೂ ಹೊರ ರಾಜ್ಯದಿಂದ ನಿಯೋಜಿಸಲ್ಪಟ್ಟ ನ್ಯಾಯವಾದಿಗಳ ತಂಡದಿಂದ ವಾದಮಂಡನೆ ನಡೆಯಲಿದ್ದು, ವಿನಯ್​​ ಕುಲಕರ್ಣಿ ಭವಿಷ್ಯ ಇಂದು ನಿರ್ಧಾರಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಇಂದು ವಿನಯ್​​ ಅವರನ್ನು ನ್ಯಾಯಾಲಯ ಮತ್ತೆ ಸಿಬಿಐ ಕಸ್ಟಡಿಗೆ ನೀಡುತ್ತಾ..? ಎಂಬ ಪ್ರಶ್ನೆ ಎದುರಾಗಿದೆ. ನ್ಯಾಯಾಲಯದಲ್ಲಿ ವಿನಯ್ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಧಾರವಾಡ ನ್ಯಾಯಾಲಯಕ್ಕೆ ವಿನಯ ಕುಲಕರ್ಣಿ
ಈಗಾಗಲೇ ಎಲ್ಲ ರೀತಿಯ ಸಿದ್ದತೆಯನ್ನು ಸಿಬಿಐ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದು, ಧಾರವಾಡದ ಉಪನಗರ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನಿಯೋಜನೆ ಮಾಡಲಾಗಿದೆ.

ABOUT THE AUTHOR

...view details