ಕರ್ನಾಟಕ

karnataka

ETV Bharat / state

ಯೋಗೀಶಗೌಡ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್ ತಡೆ - ಸಿಬಿಐ ತನಿಖೆಗೆ ಹೈಕೋರ್ಟ್​ ತಡಯಾಜ್ಞೆ

ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಿಬಿಐ ತನಿಖೆಗೆ ಬೆಂಗಳೂರು ಹೈಕೋರ್ಟ್ ತಡೆಯಾಜ್ಞೆ ನೀಡಿದೆ

ಸಿಬಿಐ ತನಿಖೆಗೆ ಹೈಕೋರ್ಟ್ ತಡೆ

By

Published : Nov 21, 2019, 6:49 PM IST

ಧಾರವಾಡ:ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಬೆಂಗಳೂರು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಯೋಗಿಶಗೌಡ ಸಹೋದರ‌ ಗುರುನಾಥಗೌಡ ಹಾಗೂ ತಾಯಿ ತುಂಗಮ್ಮ ಗೌಡರ್ ಈ ಮೊದಲು ಪ್ರಕರಣವನ್ನ ಸಿಬಿಐಗೆ ನೀಡುವಂತೆ ಸುಪ್ರೀಂಕೋರ್ಟ್ ಮೇಟ್ಟಿಲೆರಿದ್ದರು. ಆದರೆ, ಸ್ಥಳೀಯ ನ್ಯಾಯಾಲಯದಲ್ಲಿ ಇನ್ನು ಪ್ರಕರಣ ಇತ್ಯರ್ಥವಾಗಿಲ್ಲ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಪ್ರಕರಣವನ್ನ ಸಿಬಿಐಗೆ ನೀಡಲು ನಿರಾಕರಿಸಿ ಅರ್ಜಿ ವಜಾ ಮಾಡಿತ್ತು. ಆದರೂ, ಸರ್ಕಾರ ಈ ಪ್ರಕರಣ ಸಿಬಿಐಗೆ‌ ನೀಡಿತ್ತು.

ಆರೋಪಿ ಬಸವರಾಜ ಮುತ್ತಗಿ ಸೇರಿದಂತೆ 6 ಜನರ ಮೇಲೆ ಕೊಲೆ ಆರೋಪ ಇರುವ ‌ಕಾರಣ ಸಿಬಿಐ ತನಿಖೆ ವಿರುದ್ಧ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್​ ಸಿಬಿಐ ತನಿಖೆಗೆ ತಡೆಯಾಜ್ಞೆ ನೀಡಿ, ಡಿ.4ಕ್ಕೆ ವಿಚಾರಣೆ ಮುಂದೂಡಿದೆ.

ABOUT THE AUTHOR

...view details