ಧಾರವಾಡ:ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡ, ಇಂದು ಡಿವೈಎಸ್ಪಿ ತುಳಜಪ್ಪ ಸುಲ್ಫಿ ವಿಚಾರಣೆ ನಡೆಸಿದೆ.
ಯೋಗೀಶ್ ಗೌಡ ಹತ್ಯೆ ಪ್ರಕರಣ: ಡಿವೈಎಸ್ಪಿ ತುಳಜಪ್ಪ ಸುಲ್ಫಿ ವಿಚಾರಣೆ - Hubli Dharwad latest news
ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಡಿವೈಎಸ್ಪಿ ತುಳಜಪ್ಪ ಸುಲ್ಫಿ ರಾಜೀ ಸಂಧಾನಕ್ಕೆ ಯತ್ನಿಸಿದ ಆರೋಪದಡಿ ಇಂದು ಅವರನ್ನು ವಿಚಾರಣೆಗೊಳಪಡಿಸಿರುವುದಾಗಿ ತಿಳಿದು ಬಂದಿದೆ.
ಯೋಗೀಶ್ ಗೌಡ ಹತ್ಯೆ ಪ್ರಕರಣ
ಧಾರವಾಡ ಉಪನಗರ ಠಾಣೆಯಲ್ಲಿ ತನಿಖೆ ಮುಂದುವರೆದಿದ್ದು ಡಿವೈಎಸ್ಪಿ ತುಳಜಪ್ಪ ಸುಲ್ಫಿ ಇಂದು ಸಿಬಿಐ ತನಿಖೆ ಎದುರಿಸಿದ್ದಾರೆ. ರಾಜೀ ಸಂಧಾನದ ಮಧ್ಯವರ್ತಿಯಾಗಿದ್ದ ಆರೋಪದಡಿ ಇಂದು ಸುಲ್ಫಿ ಅವರನ್ನು ಇಲ್ಲಿನ ಉಪನಗರ ಠಾಣೆಗೆ ಕರೆ ತಂದು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಗುರುನಾಥಗೌಡ ಮೃತ ಯೋಗೀಶಗೌಡ ಅವರ ಸಹೋದರನಾಗಿದ್ದು, ಗುರುನಾಥಗೌಡ ಅವರ ತೋಟದ ಮನೆಗೆ ಹೋಗಿ ರಾಜೀ ಸಂಧಾನಕ್ಕೆ ಯತ್ನಿಸಿದ್ದರು. ಕೈ ನಾಯಕ ಮನೋಜ್ ಕರ್ಜಗಿ ಹಾಗೂ ಇನ್ನಿತರ ಕೆಲ ವ್ಯಕ್ತಿಗಳನ್ನು ಸಹ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.